ಬೆಂಗಳೂರು:- ರಾಜ್ಯ ಸರ್ಕಾರದಿಂದ SSLC ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ಕೊಡಲಾಗಿದೆ.
ಎಸ್, 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಶೇ. 5% ಹೆಚ್ಚಳ ಮಾಡಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶ ಹೊರಡಿಸಿದೆ. ಅದರನ್ವಯ 2025-26ನೇ ಸಾಲಿನಲ್ಲಿ ನಡೆಯಲಿರುವ ಎಲ್ಲಾ ಪರೀಕ್ಷೆಗಳಿಗೆ ಪ್ರಸ್ತುತ ಇರುವ ದರಕ್ಕೆ ಶೇ.5 ರಷ್ಟು ಸೇರಿಸಿ ಶುಲ್ಕ ವಿಧಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
SSLC ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಪರಿಷ್ಕೃತ ಪರೀಕ್ಷಾ ಶುಲ್ಕ ಹೀಗಿದೆ;
– ಪ್ರಥಮ ಬಾರಿ ಹಾಜರಾಗುವ SSLC ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ – 676 ರೂ. ನಿಂದ 710 ರೂ.ಗೆ ಹೆಚ್ಚಳ.
ಖಾಸಗಿ ಅಭ್ಯರ್ಥಿಗಳ ನೋಂದಣಿ ಶುಲ್ಕ:-
– ಹೊಸದಾಗಿ ನೋಂದಣಿಯಾಗುವ ಖಾಸಗಿ ಅಭ್ಯರ್ಥಿಗಳ ನೋಂದಣಿ ಶುಲ್ಕ ಹಾಗೂ ಅರ್ಜಿ ಶುಲ್ಕ – 236 ರೂ. ನಿಂದ 248 ರೂ.ಗೆ ಹೆಚ್ಚಳ.
– ಈಗಾಗಲೇ ಖಾಸಗಿ ಅಭ್ಯರ್ಥಿಯಾಗಿ ನೋಂದಣಿಯಾಗಿ ಪರೀಕ್ಷಾ ಶುಲ್ಕ ಪಾವತಿಸಿದ ಅಭ್ಯರ್ಥಿಗಳ ನೋಂದಣಿ ನವೀಕರಣ ಶುಲ್ಕ – 69 ರೂ. ನಿಂದ 72 ರೂ.ಗೆ ಹೆಚ್ಚಳ.
ಪುನರಾವರ್ತಿತ ಶಾಲಾ/ ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ:-
* ಒಂದು ವಿಷಯಕ್ಕೆ- 427 ರೂ ನಿಂದ 448 ಗೆ ಹೆಚ್ಚಳ
* ಎರಡು ವಿಷಯಕ್ಕೆ -532 ರೂನಿಂದ 559 ರೂಗೆ ಹೆಚ್ಚಳ.
* ಮೂರು ಮತ್ತು ಮೂರಕ್ಕಿಂತ ಜಾಸ್ತಿ ವಿಷಯಗಳು – 716 ರೂ. ನಿಂದ 752 ರೂ.ಗೆ ಹೆಚ್ಚಳ.



