ಚೀನಾದ ಮೇಲೆ ಶೇ.100 ರಷ್ಟು ಸುಂಕ ವಿಧಿಸಿದ ಡೊನಾಲ್ಡ್​ ಟ್ರಂಪ್!

0
Spread the love

ಅಮೆರಿಕ: ಭಾರತದ ಬಳಿಕ ಡೊನಾಲ್ಡ್ ಟ್ರಂಪ್ ಇದೀಗ ಚೀನಾದ ಮೇಲೆ ಶೇ.100ರಷ್ಟು ಹೆಚ್ಚುವರಿ ಸುಂಕ ವಿಧಿಸಿದ್ದಾರೆ. ಇದಲ್ಲದೆ, ಡೊನಾಲ್ಡ್ ಟ್ರಂಪ್ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಮಾತುಕತೆ ಮತ್ತು ಸಭೆಗಳ ಸಾಧ್ಯತೆಯನ್ನು ಸಹ ತಿರಸ್ಕರಿಸಿದ್ದಾರೆ. ಚೀನಾದ ಉತ್ಪನ್ನಗಳ ಮೇಲಿನ ಶೇ.100 ರಷ್ಟು ಸುಂಕವು ನವೆಂಬರ್ 1, 2025 ರಿಂದ ಜಾರಿಗೆ ಬರಲಿದೆ ಎಂದು ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

Advertisement

ಈ ಕುರಿತು ತಮ್ಮದೇ ಸಾಮಾಜಿಕ ಜಾಲತಾಣ ಟ್ರೂತ್‌ ಸೋಷಿಯಲ್‌ನಲ್ಲಿ ಮಾಹಿತಿ ನೀಡಿರುವ ಟ್ರಂಪ್‌ “ಚೀನಾ ತನ್ನ ವ್ಯಾಪಾರದಲ್ಲಿ ಆಕ್ರಮಣಕಾರಿ ನೀತಿಯನ್ನು ಪಾಲಿಸುತ್ತಿದ್ದು, ಹಲವು ದೇಶಗಳಿಗೆ ಬೆದರಿಕೆ ನೀಡುವ ರೀತಿಯಲ್ಲಿ ಪತ್ರ ಕಳುಹಿಸುತ್ತಿದೆ.

ಹಾಗಾಗಿ ಈ ಕ್ರಮವನ್ನು ಖಂಡಿಸುತ್ತಾ ನ.1ರಿಂದ ಚೀನಾ ತಾಯಾರಿಸುವ ಎಲ್ಲ ವಸ್ತುಗಳ ಮೇಲೆ ಭಾರಿ ಸುಂಕ ವಿಧಿಸುತ್ತಿರುವುದಾಗಿ ಅಲ್ಲದೇ ಒಂದು ವೇಳೆ ಚೀನಾ ಹೆಚ್ಚುವರಿ ಕ್ರಮ ತೆಗೆದುಕೊಂಡರೆ ಈ ಸುಂಕವನ್ನು ನಾವು ಇನ್ನೂ ಬೇಗನೆ ಜಾರಿಗೆ ತರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕೆಲ ದಿನಗಳ ಹಿಂದಷ್ಟೆ ಅಮೆರಿಕಾ ಹಾಗೂ ಚೀನಾ ವ್ಯಾಪಾರ ಮಾತುಕತೆಯನ್ನು ನಡೆಸುತ್ತಿದ್ದು ಸುಂಕ ಸಮರಕ್ಕೆ ಬ್ರೇಕ್‌ ನೀಡಿತ್ತು, ಆದರೆ ಇದರ ನಡುವೆ ಚೀನಾ ವಿರಳ ಭೂಖನಿಜಗಳ ಮೇಲೆ ಚೀನಾ ಹೊಸ ರಫ್ತು ನಿಯಂತ್ರಣಗಳನ್ನು ವಿಸ್ತರಿಸಿತು. ಇದರಿಂದ‌ ಟ್ರಂಪ್ ನ.1ರಿಂದ ಚೀನಾದಿಂದ ಅಮೆರಿಕಾಗೆ ರಫ್ತಾಗುವ ಎಲ್ಲ ವಸ್ತುಗಳ ಮೇಲೆ ಶೇ.100% ಸುಂಕ ವಿಧಿಸಿಲ್ಲಿದ್ದೇವೆ ಎಂದ್ದಿದ್ದಾರೆ.


Spread the love

LEAVE A REPLY

Please enter your comment!
Please enter your name here