ಮಂಗಳೂರು:- ಮಂಗಳೂರು ಪೊಲೀಸರು ಕಾರ್ಯಾಚರಣೆ ಮಾಡಿ ನಿಷೇಧಿತ ಉಗ್ರ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪರವಾಗಿ ಪ್ರಚಾರ ಮಾಡಿದ್ದ ಮುಸ್ಲಿಂ ಧರ್ಮಗುರು ಬಂಧಿಸಿದ್ದಾರೆ.
ಸೈಯ್ಯದ್ ಇಬ್ರಾಹಿಂ ಬಂಧಿತರು. ಸಾಮಾಜಿಕ ಜಾಲತಾಣದಲ್ಲಿ ಸಂಘಟನೆ ಕುರಿತು ಪ್ರಚಾರ ಮಾಡುತ್ತಿದ್ದ. ಈಗ ಆತ ನ್ಯಾಯಾಂಗದ ವಶದಲ್ಲಿದ್ದಾನೆ.
ಧರ್ಮಗುರು PFI ಪರವಾಗಿ, ಸಂಘಟನೆಯ ಪುನರ್ ರಚನೆಯ ಬಗ್ಗೆ ಪ್ರಚಾರ ಮಾಡುವುದಷ್ಟೇ ಅಲ್ಲದೇ ವಾಟ್ಸಾಪ್ನಲ್ಲಿ ಸಲಮಾನ್ ಸಲಮಾ ಎಂಬ ಗ್ರೂಪ್ ರಚನೆ ಮಾಡಿದ್ದ. ಈ ಗ್ರೂಪ್ ಮೂಲಕ ಭೂಗತರಾಗಿರುವ PFI ಸದಸ್ಯರನ್ನು ಸಂಪರ್ಕಿಸಿದ್ದ ಸೈಯ್ಯದ್ ಇಬ್ರಾಹಿಂ ತಂಙಳ್, ಮತ್ತೆ ಚಟುವಟಿಕೆ ಆರಂಭಿಸಲು ಪ್ರಚೋದನೆ ನೀಡುತ್ತಿದ್ದ.
ನಗರದ ಉರ್ವ ಸ್ಟೋರ್ ಬಳಿಯಿಂದ ಈತನನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಈತನಿಂದ ಮೊಬೈಲ್ ಫೋನ್ನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು NIA ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಸೈಯ್ಯದ್ ಇಬ್ರಾಹಿಂನನ್ನು ಹಾಜರು ಪಡಿಸಿದ್ದಾರೆ. ದಿನಾಂಕ 24-10-2025 ವರೆಗೆ ಆತನನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.