ಚಿನ್ನ.. ಪ್ರಪಂಚದಾದ್ಯಂತ ವಿಶೇಷ ಸ್ಥಾನ ಹೊಂದಿದೆ. ಹಳದಿ ಬಣ್ಣದ ಚಿನ್ನ ಮಹಿಳೆಯರಿಗೆ ಅಚ್ಚು ಮೆಚ್ಚು. ಯಾವುದೇ ಋತುವಿನಲ್ಲಿ ಚಿನ್ನದ ಖರೀದಿ ಎಂಬುದು ಇದ್ದೆ ಇರುತ್ತದೆ. ಹಬ್ಬ ಹರಿದಿನ, ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳಲ್ಲಿ ಚಿನ್ನದ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತವೆ.
ಪ್ರಪಂಚದಾದ್ಯಂತ ಚಿನ್ನಕ್ಕೆ ಯಾವಾಗಲೂ ಬೇಡಿಕೆ ಇರುತ್ತದೆ. ಹೂಡಿಕೆಯಲ್ಲಿ ಚಿನ್ನ ಪ್ರಮುಖ ಪಾತ್ರ ವಹಿಸುತ್ತದೆ. ಬೆಳ್ಳಿ ಬೆಲೆ ಇಂದು ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಚಿನ್ನದ ಬೆಲೆಯೂ ಮತ್ತೊಂದು ಹೊಸ ದಾಖಲೆ ಬರೆದಿದೆ.
ದೇಶೀಯ ಮಾರುಕಟ್ಟೆಯಲ್ಲಿ ಅಕ್ಟೋಬರ್ 13 ಸೋಮವಾರದಂದು 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 12,540 ರೂಪಾಯಿಗೆ ತಲುಪಿದೆ. ಇಂದು ಗ್ರಾಂ ಒಂದಕ್ಕೆ ಬೆಲೆ ಬರೋಬ್ಬರಿ 32 ರೂಪಾಯಿ ಹೆಚ್ಚಳ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ 30 ರೂಪಾಯಿ ಏರಿಕೆ ಆಗಿದ್ದು, 11,495 ರುಪಾಯಿ ಆಗಿದೆ.
ಬೆಳ್ಳಿಯೂ ಚಿನ್ನದಷ್ಟೇ ವೇಗವಾಗಿ ಬೆಲೆ ಹೆಚ್ಚಳ ಕಾಣುತ್ತಿದೆ. ಗ್ರಾಂ ಒಂದಕ್ಕೆ ಚಿನ್ನದ ಬೆಲೆ 185 ರೂಪಾಯಿಗೆ ತಲುಪಿದೆ. ಕೆಜಿ ಬೆಲೆ 1,85,000 ರೂ ಆಗಿದೆ. ಇಂದು ಬರೋಬ್ಬರಿ 2 ರೂಪಾಯಿ 7 ಪೈಸೆ ಹೆಚ್ಚಳ ಕಂಡಿದೆ. ಅಕ್ಟೋಬರ್ ತಿಂಗಳ 13 ದಿನದಲ್ಲಿ, 1 ಕೆಜಿ ಬೆಳ್ಳಿಗೆ 34 ಸಾವಿರ ರೂ ಹೆಚ್ಚಳವಾಗಿದೆ.