ಈ ಬಾರಿ ‘ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಎಲ್ಲವೂ ವಿಭಿನ್ನವಾಗಿದೆ.
ಇದೇ ಮೊದಲ ಬಾರಿ ಶೋನಲ್ಲಿ ಎರಡು ಫಿನಾಲೆ ಪರಿಚಯವಾಗಿದೆ. ಮೂರನೇ ವಾರದಲ್ಲೇ ಅ.18 ಮತ್ತು 19ರಂದು ಮಿಡ್ ಸೀಸನ್ ಫಿನಾಲೆ ನಡೆಯಲಿದೆ. ರಾತ್ರಿ 8 ಗಂಟೆಯಿಂದ 11 ಗಂಟೆಯವರೆಗೆ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಇದು ಸಾಮಾನ್ಯ ವಾರಾಂತ್ಯ ಎಲಿಮಿನೇಷನ್ ಅಲ್ಲ – ದೊಡ್ಡ ಟ್ವಿಸ್ಟ್ ಗ್ಯಾರಂಟಿ! ಈ ವಿಶೇಷ ಫಿನಾಲೆ ಎಪಿಸೋಡ್ಗಳಲ್ಲಿ:
- ಭಾರಿ ಎಲಿಮಿನೇಷನ್
2. ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿ
3. ಸೆಲೆಬ್ರಿಟಿಗಳ ಭೇಟಿ, ನೃತ್ಯ, ಹಾಸ್ಯ ಮತ್ತು ಭರ್ಜರಿ ಮನರಂಜನೆ
4. ಫಿನಾಲೆ-ಸ್ಟೈಲ್ ಬಹುಮಾನ ಘೋಷಣೆ!
ಈ ಮಿಡ್ ಫಿನಾಲೆ ನಿಜಕ್ಕೂ ‘ಚಿಕ್ಕ ಫಿನಾಲೆ’ ಅಲ್ಲ, ಬದಲಿಗೆ ಶೋನ ಮಾರ್ಗವನ್ನೇ ಬದಲಾಯಿಸಬಲ್ಲ ಘಟ್ಟವಾಗಿದೆ. “Expect The Unexpected” ಎಂಬ ಥೀಮ್ ತಕ್ಕಂತೆ, ಈ ಬಾರಿ ಆಟಕ್ಕೂ, ಆಟಗಾರರಿಗೂ ಹೊಸ ತಿರುವುಗಳು ಕಾದಿವೆ.
ಇನ್ನೂ ಬರುವ ಹೊಸ ಸ್ಪರ್ಧಿಗಳು ಯಾರು? ಯಾರು ಹೊರ ಹೋಗ್ತಾರೆ? ಯಾರು ಗೆಲ್ಲ್ತಾರೆ? ಎಲ್ಲವೂ ತಿಳಿಯಬೇಕಾದರೆ ಅ.18 ಮತ್ತು 19 ರಂದು ನಡೆಯುವ ಎಪಿಸೋಡ್ ನಂತರ ತಿಳಿಯಲಿದೆ.