IND vs WI: ವೆಸ್ಟ್​ ಇಂಡೀಸ್​ ಕ್ಲೀನ್​ ಸ್ವೀಪ್​ ಮಾಡಿ ಟೆಸ್ಟ್​ ಸರಣಿ ಗೆದ್ದ ಭಾರತ!

0
Spread the love

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಸರಣಿ ಮುಗಿದಿದೆ. 2 ಪಂದ್ಯಗಳ ಈ ಸರಣಿಯ ಎರಡೂ ಮ್ಯಾಚ್​ಗಳಲ್ಲೂ ಟೀಮ್ ಇಂಡಿಯಾ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 140 ರನ್​ಗಳ ಜಯ ಸಾಧಿಸಿದ್ದ ಭಾರತ ತಂಡವು ಇದೀಗ ದ್ವಿತೀಯ ಪಂದ್ಯದಲ್ಲೂ ಜಯಭೇರಿ ಬಾರಿಸಿದೆ.

Advertisement

ಹೌದು ಮೊದಲ ದಿನ ಟಾಸ್​ ಗೆದ್ದು ಬ್ಯಾಟ್ ಮಾಡಿದ್ದ ಭಾರತ ತಂಡ, ಒಟ್ಟು 518 ರನ್​ಗಳಿಸಿ ಡಿಕ್ಲೇರ್​ ಮಾಡಿಕೊಂಡಿತ್ತು. ಪ್ರತಿಯಾಗಿ ಬ್ಯಾಟಿಂಗ್​​ಗೆ ಇಳಿದ್ದ ವಿಂಡೀಸ್​, ನಿನ್ನೆಯ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 140 ರನ್​ಗಳಿಸಿತ್ತು. ಅಂತೆಯೇ ಬ್ಯಾಟಿಂಗ್​ಗೆ ಇಳಿದ ವಿಂಡೀಸ್ 248 ರನ್​​ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಗಿ, ಫಾಲೋ ಆನ್ ಸುಳಿಗೆ ಸಿಲುಕಿತ್ತು.

ಆದ್ರೆ ಭಾರತದ ಪರ ಒಂದು ತುದಿಯಲ್ಲಿ ಗಟ್ಟಿಯಾಗಿ ನೆಲೆಯೂರಿದ ಕನ್ನಡಿಗ ಕೆಎಲ್ ರಾಹುಲ್ ತಂಡವನ್ನು ಜಯದ ದಡ ಸೇರಿಸುವಲ್ಲಿ ಯಶಸ್ವಿಯಾದರು. 108 ಎಸೆತಗಳನ್ನು ಎದುರಿಸಿದ ಅವರು 6 ಬೌಂಡರಿ ಮತ್ತು 2 ಸಿಕ್ಸರ್‌ನೊಂದಿಗೆ 58 ರನ್ ಗಳಿಸಿ ಅಜೇಯರಾಗಿ ಉಳಿದರು. ವಿಂಡೀಸ್ ಪರ ನಾಯಕ ರೋಸ್ಟನ್ ಚೇಸ್ 2 ವಿಕೆಟ್‌, ಜೋಮೆಲ್ ವಾರಿಕನ್ ಒಂದು ವಿಕೆಟ್‌ ಪಡೆದರು.

ವಿಂಡೀಸ್ ತಂಡ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪ್ರತಿಹೋರಾಟ ನೀಡಿ 390 ರನ್ ಗಳಿಸಿತಾದರೂ ಜಯದ ಗುರಿ ಕೇವಲ 120 ರನ್ ಗಳಾಗಿದ್ದರಿಂದ ಭಾರತಕ್ಕೆ ಸುಲಭ ತುತ್ತಾಯಿತು. ಪಂದ್ಯವನ್ನು 4ನೇ ದಿನದೊಳಗೇ ಮುಗಿಸುವ ಉತ್ಸಾಹವನ್ನು ಭಾರತ ಹೊಂದಿತ್ತು. ಆದ್ರೆ ಯಶಸ್ವಿ ಜೈಸ್ವಾಲ್ 8 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ ಬಳಿಕ ನಿಧಾನಗತಿಯ ಬ್ಯಾಟಿಂಗ್‌ಗೆ ಇಳಿಯಿತು.

4ನೇ ದಿನಾಂತ್ಯಕ್ಕೆ 18 ಓವರ್ ಗಳಲ್ಲಿ ಒಂದು ವಿಕೆಟ್‌ಗೆ 63 ರನ್ ಗಳಿಸಿದ್ದ ಭಾರತ ತಂಡ 5ನೇ ದಿನ ಮೊದಲ ಅವಧಿಯಲ್ಲಿ 13 ಓವರ್ ಗಳಲ್ಲಿ ಗೆಲುವಿಗೆ ಅಗತ್ಯವಿದ್ದ ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಕೆಎಲ್ ರಾಹುಲ್ ಅವರಿಗೆ ಉತ್ತಮ ಸಾಥ್ ನೀಡಿದ್ದ ಸಾಯಿ ಸುದರ್ಶನ್ 76 ಎಸೆತಗಳಲ್ಲಿ 39 ರನ್ ಗಳಿಸಿದ್ರೆ, ನಾಯಕ ಶುಭಮನ್ ಗಿಲ್ 13 ರನ್‌ ಔಟಾದ್ರೆ, ಧ್ರುವ್ ಜುರೆಲ್‌ 6 ರನ್‌ ಗಳಿಸಿ ಅಜೇಯರಾಗುಳಿದರು. ಈ ಗೆಲುವಿನೊಂದಿಗೆ ಶುಬ್ಮನ್ ಗಿಲ್ ನಾಯಕತ್ವಕ್ಕೆ ಮತ್ತೊಂದು ಸರಣಿ ಒಲಿದಿದೆ.


Spread the love

LEAVE A REPLY

Please enter your comment!
Please enter your name here