ಹುಬ್ಬಳ್ಳಿ: ದೀಪಾವಳಿ ಹಬ್ಬದ ಸಂಭ್ರಮದ ಭಾಗವಾಗಿ, ಜೀವ ಧ್ವನಿ ಫೌಂಡೇಶನ್ (ರಿ) ವತಿಯಿಂದ ಹುಬ್ಬಳ್ಳಿ ನಗರದ ವಿವಿಧ ಭಾಗಗಳಲ್ಲಿನ ಕಷ್ಟಪಟ್ಟು ದುಡಿಯುವ ಬಡ ಮಹಿಳೆಯರಿಗೆ ಹೊಸ ಸೀರೆಗಳ ವಿತರಣೆ ಸೇವಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಸಂತೋಷ್ ಆರ್ ಶೆಟ್ಟಿ, ಸಂಸ್ಥಾಪಕರಾದ ನಿಖಿಲ್ ಹಂಜಗಿ ನೇತೃತ್ವ ವಹಿಸಿದ್ದರು. ಅವರೇ ಸ್ವತಃ ಸೀರೆಗಳನ್ನು ವಿತರಿಸಿ, ಮಹಿಳೆಯರೊಂದಿಗೆ ದೀಪಾವಳಿ ಹಬ್ಬದ ಸಂತೋಷವನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಎಸ್ ಟಿ ಬಂಡಾರಿ ಮಾಲೀಕರು, ಸಂಸ್ಥೆಯ ಸದಸ್ಯರು ಮತ್ತು ಹಲವಾರು ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು. ಅದಲ್ಲದೆ ಈ ವೇಳೆ ಗುರು ಉಂಕಿ, ಪರೋಕ್ಷ ಹೂಲಿ, ವಿಜಯ್ ಮೆಹರವಾಡೆ, ಶರೀಫ್, ಕಾರ್ತಿಕ್ ಕಿಂಟಿಗೊಂಡ್, ಪುನೀತ್, ಚನ್ನಪ್ಪ, ರಾಘವೇಂದ್ರ ಬಳ್ಳಾರಿ, ಅವಿನಾಶ್, ಕಿರಣ್ ಕೊಪ್ಪದ್, ಶ್ರೇಯಸ್ ಚೆನ್ನಿ, ಅನಿಕೇತ್ ಅರ್ಚಕ, ಶ್ರೀನಿವಾಸ್,
ವಿನಾಯಕ್, ಉಮೇಶ್ ಬದ್ದಿ, ರೋಹಿತ್, ವಿನೋದ್, ಮತ್ತು ಮಹಿಳಾ ಸದಸ್ಯರಾದ ಅಪೇಕ್ಷ, ಬೂಮಿಕಾ, ರೇಣುಕ, ಜಾನ್ವಿ ಸುನಗರ, ಶಾಹೀನ್, ವನಮಾಲಾ, ಸ್ವಾತಿ, ವೈಷ್ಣವಿ, ಪ್ರೀತಿ, ಸಂಜನಾ, ಪ್ರೇತಿ ಮೊದಲಾದವರು ಉಪಸ್ಥಿತರಿದ್ದರು. ಬಡ ಮಹಿಳೆಯರಿಗೆ ಸೀರೆ ಹಂಚುವ ಈ ಸೇವಾ ಕಾರ್ಯವು ಅವರ ಮುಖದಲ್ಲಿ ಸಂತೋಷವನ್ನು ಮೂಡಿಸಿದ್ದು, ದೀಪಾವಳಿಯ ನಿಜವಾದ ಅರ್ಥವನ್ನೇ ಪ್ರತಿಬಿಂಬಿಸಿದೆ.