ನಟಿ ಪರಿಣಿತಿ ಚೋಪ್ರಾ, ಸಂಸದ ರಾಘವ್ ಚಡ್ಡಾ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ದಂಪತಿ ಮನೆಗೆ ಮುದ್ದಾದ ಮಗುವನ್ನು ಭರಮಾಡಿಕೊಂಡಿದ್ದಾರೆ. ದೀಪಾವಳಿಗೆ ಒಂದು ದಿನ ಮೊದಲು ಪರಿಣಿತಿ ಚೋಪ್ರಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಮಗು ಜನಿಸಿದ ಸುದ್ದಿಯಲ್ಲಿ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ. ‘ನಮ್ಮ ತೋಳುಗಳು ತುಂಬಿವೆ, ಹೃದಯಗಳು ಇನ್ನೂ ತುಂಬಿವೆ ಎಂದು ನಟಿ ಬರೆದುಕೊಂಡಿದ್ದಾರೆ.
ನಮ್ಮ ಪುಟ್ಟ ಅತಿಥಿ.. ಮತ್ತು ನಾವು ನಿಜವಾಗಿಯೂ ಹಿಂದಿನ ಜೀವನ ಕಳೆದುಕೊಳ್ಳುವುದಿಲ್ಲ! ನಮ್ಮ ತೋಳುಗಳು ತುಂಬಿವೆ, ನಮ್ಮ ಹೃದಯಗಳು ಇನ್ನೂ ತುಂಬಿವೆ. ನಾವು ಒಬ್ಬರನ್ನೊಬ್ಬರು ಮಾತ್ರ ಹೊಂದಿದ್ದ ಮೊದಲು, ಈಗ ನಮಗೆ ಎಲ್ಲವೂ ಇದೆ. ಎಲ್ಲರಿಗೂ ಧನ್ಯವಾದಗಳು ಎಂದು ಪರಿಣಿತಿ ಮತ್ತು ರಾಘವ್” ಎಂದು ದಂಪತಿ ಬರೆದುಕೊಂಡಿದ್ದಾರೆ.
ಸೆಪ್ಟೆಂಬರ್ 2023ರಲ್ಲಿ ರಾಜಸ್ಥಾನದ ಉದಯಪುರದ ದಿ ಲೀಲಾ ಪ್ಯಾಲೇಸ್‌ನಲ್ಲಿ ರಾಘವ್ ಹಾಗೂ ಪರಿಣಿತಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದರು. ಆಪ್ತರು, ಸ್ನೇಹಿತರು, ಕುಟುಂಬಸ್ಥರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು. ಆಗಸ್ಟ್ 25, 2025 ರಂದು ಈ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರೋದನ್ನು ಘೋಷಣೆ ಮಾಡಿದ್ದರು.