HomeGadag Newsಕಳ್ಳ ಅಂತ ಬೆನ್ನಟ್ಟಿದ ಸ್ಥಳೀಯರು: ರಾತ್ರೋರಾತ್ರಿ ತೆಂಗಿನ ಮರ ಏರಿ ಕೂತ ಯುವಕ!

ಕಳ್ಳ ಅಂತ ಬೆನ್ನಟ್ಟಿದ ಸ್ಥಳೀಯರು: ರಾತ್ರೋರಾತ್ರಿ ತೆಂಗಿನ ಮರ ಏರಿ ಕೂತ ಯುವಕ!

For Dai;y Updates Join Our whatsapp Group

Spread the love

ಗದಗ:- ನಗರದ ವಿವೇಕಾನಂದ ನಗರ ಬಡಾವಣೆಯಲ್ಲಿ ರಾತ್ರಿ ವೇಳೆ ತೆಂಗಿನ ಮರ ಏರಿ ಯುವಕ ಹೈಡ್ರಾಮಾ ಸೃಷ್ಟಿಸಿದ ಘಟನೆ ಜರುಗಿದೆ.

ಬೆಳಗಾವಿ ಜಿಲ್ಲೆಯ ಗಬ್ಬೂರು ಗ್ರಾಮದ ನಿವಾಸಿ ಬಸವರಾಜ್ ಸೊಲ್ಲಾಪುರ ಎಂಬಾತ, ಕಳ್ಳನೆಂದು ಸ್ಥಳೀಯರು ಬೆನ್ನಟ್ಟುತ್ತಿದ್ದಾಗ ಭಯಗೊಂಡು ತೆಂಗಿನ ಮರಕ್ಕೆ ಏರಿ ಕುಳಿತಿದ್ದಾನೆ.

ಮಂಗಳವಾರ ಬೆಳಿಗ್ಗೆ 4 ಗಂಟೆಯ ವೇಳೆಗೆ ನಡೆದ ಈ ಘಟನೆ ಎರಡು ಗಂಟೆಗಳ ಕಾಲ ಮುಂದುವರಿಯಿತು. ಕೆಳಗೆ ಇಳಿಯಲಾಗದೆ ಪರದಾಡುತ್ತಿದ್ದ ಬಸವರಾಜ್‌ನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಕೆಳಗೆ ಇಳಿಸಿದರು.

ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆತನನ್ನು ಬೆಟಗೇರಿ ಬಡಾವಣೆ ಪೊಲೀಸರಿಗೆ ಒಪ್ಪಿಸಿದರು. ಬಸವರಾಜ್‌ನ ಹಿನ್ನಲೆ ಹಾಗೂ ಘಟನೆಯ ನಿಖರ ಕಾರಣ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!