ಇಂದು ಕರ್ನಾಟಕ ರತ್ನ, ಅಪ್ಪು ಖ್ಯಾತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 4ನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಗುತ್ತಿದೆ. ದೊಡ್ಮನೆಯ ರಾಜಕುಮಾರನ ನೆನಪು, ಕರುನಾಡಿನ ಜನರ ಹೃದಯದಲ್ಲಿ ನೋವಿನ ಜೊತೆಗೆ ಸವಿನೆನಪಿನ ಸಂಭ್ರಮವನ್ನು ಹುಟ್ಟುಹಾಕುತ್ತಿದೆ.
ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಅಪ್ಪು ಕಟ್ಟಿದ್ದ ಪಿಆರ್ಕೆ ಅನ್ನು ಅದೇ ಘನತೆಯಿಂದ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಜೊತೆಗೆ ಅಪ್ಪು ಪ್ರಾರಂಭಿಸಿದ್ದ ಸಾಮಾಜಿಕ ಕಾರ್ಯಗಳನ್ನು ಸಹ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಇಂದು ಅಪ್ಪು ಪುಣ್ಯಸ್ಮರಣೆಯ ದಿನ ಅಪ್ಪು ಸಮಾಧಿಗೆ ಭೇಟಿ ನೀಡಿದ್ದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಪುನೀತ್ ರಾಜ್‌ಕುಮಾರ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ಈ ವೇಳೆ ರಾಘವೇಂದ್ರ ರಾಜ್‌ಕುಮಾರ್ ಸಹ ಜೊತೆಗಿದ್ದರು.
ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಆಗಮಿಸಿದ್ದು, ಅಪ್ಪು ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಪೂಜೆ ವೇಳೆ ಅಭಿಮಾನಿಗಳು ಅಪ್ಪು ಅಪ್ಪು ಅಂತಾ ಜೈಕಾರ ಹಾಕುತ್ತಿದ್ದು, ಕೈಯಲ್ಲಿ ರೋಸ್ ಹಿಡಿದು ಆಗಮಿಸುತ್ತಿದ್ದಾರೆ. ಇನ್ನೂ ಯುವ ರಾಜ್‌ಕುಮಾರ್‌ನ್ನು ನೋಡಿ ಜೂ.ಪವರ್ ಸ್ಟಾರ್‌ಗೆ ಎಂದು ಜೈ ಎಂದು ಜೈಕಾರ ಹಾಕುತ್ತಿದ್ದಾರೆ.


