ಕೋಲಾರ: ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ.
Advertisement
ಚಿಂತಾಮಣಿ ತಾಲ್ಲೂಕಿನ ಗಂಡ್ರಗಾನಹಳ್ಳಿ ಗ್ರಾಮದ ನಿವಾಸಿ ಆದರ್ಶ್ (33) ಮೃತ ಯುವಕನಾಗಿದ್ದು, ಮೃತದೇಹ ಭೂಮಿಗೆ ತಗುಲಿದ ಕಾರಣದಿಂದ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಆತ್ಮಹತ್ಯೆಯೋ, ಕೊಲೆಯೋ? ಘಟನೆಯ ಹಿಂದೆ ಇರುವ ರಹಸ್ಯ ಭೇದಿಸಲು ಪೊಲೀಸರ ತನಿಖೆ ಆರಂಭವಾಗಿದ್ದು, ಶ್ರೀನಿವಾಸಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


