ಶ್ರೀ ರಂಭಾಪುರಿ ಪೀಠದಲ್ಲಿ ಸಹಸ್ರ ದೀಪೋತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಕಾರ್ತಿಕ ಸಹಸ್ರ ದೀಪೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ರಥೋತ್ಸವ ನವೆಂಬರ್ 5ರ ಸಂಜೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜರುಗುವುದು.

Advertisement

ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಕಾರ್ಯಕ್ರಮ ಉದ್ಘಾಟಿಸುವರು. ಅಂದು ಬೆಳಿಗ್ಗೆ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ, ಶ್ರೀ ಸೋಮೇಶ್ವರ ಮಹಾಲಿಂಗ, ಶ್ರೀ ವಿಜಯ ವಿನಾಯಕ, ಶಕ್ತಿಮಾತೆಯರಾದ ಶ್ರೀ ಪಾರ್ವತಿ, ಶ್ರೀ ಚೌಡೇಶ್ವರಿ, ಶ್ರೀ ಭದ್ರಕಾಳಿ ಹಾಗೂ ಲಿಂಗೈಕ್ಯ ಜಗದ್ಗುರುಗಳವರ ಗದ್ಗುಗೆಗಳಿಗೆಗದುಗೆಗಳಿಗೆ ವಿಶೇಷ ಪೂಜೆ ಜರುಗುವುದು.

ದೀಪಾರಾಧನೆ ಸೇವೆಯನ್ನು ಶಿಗ್ಗಾಂವಿಯ ಲಲಿತಾದೇವಿ ಶಿವಪುತ್ರಯ್ಯ ಸುರಗೀಮಠ ಮತ್ತು ಮಕ್ಕಳು, ವಿದ್ಯುತ್ ದೀಪಾಲಂಕಾರ ಸೇವೆಯನ್ನು ಹುಬ್ಬಳ್ಳಿಯ ವೀರೇಶ ಪಾಟೀಲ ಹಾಗೂ ಬಾಳೆಹೊನ್ನೂರು, ಬಾಸಾಪುರ, ಕಡವಂತಿ, ಆಲ್ದೂರು ಸದ್ಭಕ್ತರು ನಡೆಸುವರು. ರಥೋತ್ಸವ ಮತ್ತು ದಾಸೋಹ ಸೇವೆಯನ್ನು ಚಿಕ್ಕಮಗಳೂರಿನ ಶಾಂತಮ್ಮ ಮತ್ತು ಮಕ್ಕಳು ನೆರವೇರಿಸುವರು. ಸಕಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಪೀಠದ ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here