HomeEntertainmentಹತ್ತು ವರ್ಷಗಳ ಹಿಂದೆಯೇ ಮದುವೆಯಾಗಿದ್ರಾ ದರ್ಶನ್‌, ಪವಿತ್ರಾ ಗೌಡ: ಹಳೆಯ ಫೋಟೋ ವೈರಲ್

ಹತ್ತು ವರ್ಷಗಳ ಹಿಂದೆಯೇ ಮದುವೆಯಾಗಿದ್ರಾ ದರ್ಶನ್‌, ಪವಿತ್ರಾ ಗೌಡ: ಹಳೆಯ ಫೋಟೋ ವೈರಲ್

For Dai;y Updates Join Our whatsapp Group

Spread the love

ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ತೂಗುದೀಪ ಮತ್ತು ಪವಿತ್ರಾ ಗೌಡ ಅವರ ಹಳೆಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಮದುವೆಯ ಉಡುಪಿನಲ್ಲಿ ಕಾಣಿಸಿಕೊಂಡಿರುವ ಈ ಫೋಟೋಗಳಲ್ಲಿ, ದರ್ಶನ್ ಮದುಮಗನ ವೇಷದಲ್ಲೂ, ಪವಿತ್ರಾ ಗೌಡ ಕತ್ತಿನಲ್ಲಿ ಅರಿಶಿಣದ ದಾರ ಧರಿಸಿರುವುದೂ ಗಮನ ಸೆಳೆದಿದೆ. ಈ ಚಿತ್ರಗಳು “ದರ್ಶನ್–ಪವಿತ್ರಾ ಮದುವೆ ಫೋಟೋ” ಎಂದು ವೈರಲ್ ಆಗುತ್ತಿದ್ದರೂ, ಇವು ನಿಜವಾಗಿಯೂ ಮದುವೆ ಸಂದರ್ಭದವೋ ಅಥವಾ ಬೇರೆ ವೇಳೆ ತೆಗೆದ ಚಿತ್ರಗಳೋ ಎಂಬುದಕ್ಕೆ ಯಾವುದೇ ಅಧಿಕೃತ ದೃಢೀಕರಣ ಸಿಕ್ಕಿಲ್ಲ.

ದರ್ಶನ್‌, ಪವಿತ್ರಾ ಗೌಡ ಫೋಟೋಗಳು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್… ಹೀಗೆ ಎಲ್ಲ ಕಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.  ವೈರಲ್ ಆಗಿರೋ ಫೋಟೋಗಳಲ್ಲಿ ದರ್ಶನ್ ಮತ್ತು ಪವಿತ್ರಾ ಇಬ್ಬರೂ ಪಕ್ಕಾ ಮದುಮಕ್ಕಳ ಥರ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದು, ನಗುನಗುತ್ತಾ ಸೆಲ್ಫಿಗೆ ಫೋಸ್‌ ಕೊಟ್ಟಿದ್ದಾರೆ.

ದರ್ಶನ್ ಅವರ ವೈಯಕ್ತಿಕ ಜೀವನ ಹಾಗೂ ಪವಿತ್ರಾ ಗೌಡ ಅವರೊಂದಿಗಿನ ಸಂಬಂಧದ ಕುರಿತು ಹಿಂದಿನಿಂದಲೇ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಇವರಿಬ್ಬರೂ ಈ ವಿಷಯದಲ್ಲಿ ಯಾವುದೇ ವೇಳೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಇದೀಗ, ಮದುವೆಯ ವೇಷದಲ್ಲಿ ಇಬ್ಬರೂ ಕಾಣಿಸಿಕೊಂಡಿರುವ ಸೆಲ್ಫಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಆ ಚರ್ಚೆಗೆ ಮತ್ತೊಮ್ಮೆ ಬೆಂಕಿ ಹಚ್ಚಿದಂತಾಗಿದೆ. ಈ ಫೋಟೋಗಳು ನಿಜವಾಗಿಯೂ ಮದುವೆ ಸಂದರ್ಭದವೋ ಅಥವಾ ಬೇರೆ ಕಾರ್ಯಕ್ರಮದವೋ ಎಂಬುದಕ್ಕೆ ಯಾವುದೇ ದೃಢೀಕರಣ ಸಿಕ್ಕಿಲ್ಲವಾದರೂ, ಅಭಿಮಾನಿಗಳ ಕುತೂಹಲ ತೀವ್ರಗೊಂಡಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!