ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾಕಳಿಯ ಬೈಲಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಭೀಕರ ಘಟನೆ ನಡೆದಿದೆ. ದೇವಸ್ಥಾನದ ಪ್ರವೇಶದ್ವಾರದ ಗೇಟ್ ಅನಿರೀಕ್ಷಿತವಾಗಿ ಕುಸಿದ ಪರಿಣಾಮ, ಸ್ಥಳದಲ್ಲಿ ಆಟವಾಡುತ್ತಿದ್ದ ಬಾಲಕನ ಕಾಲು ಮುರಿದು ಗಂಭೀರ ಗಾಯವಾಗಿದೆ.
Advertisement
ಬಾಲಕ ಲೋಹಿತ್ ನಾಯಕ್ ಆಟವಾಡುತ್ತಿದ್ದಾಗ ಗೇಟ್ ಕುಸಿದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಕ್ಯಾಬ್ ಚಾಲಕನಾಗಿರುವ ಬಾಲಕನ ತಂದೆ ನಿನ್ನೆ ನೆಲಮಂಗಲ ಬಳಿಯ ಮಾಕಳಿ ಬೈಲಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮಗನನ್ನ ಕರೆದುಕೊಂಡು ಹೋಗಿದ್ದರು.
ದೇಸ್ಥಾನದ ಬಳಿ ಆಟವಾಡಲು ಹೋಗಿದ್ದಾಗ ಘಟನೆ ನಡೆದಿದೆ. ಸದ್ಯ ಬಾಲಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ದೇವಸ್ಥಾನದ ಗೇಟ್ ತುಂಬಾ ಹಳೆಯದಾಗಿದ್ದರಿಂದ ಘಟನೆ ನಡೆದಿದೆ, ಇದು ಮುಜರಾಯಿ ಇಲಾಖೆಯ ನಿರ್ಲಕ್ಷ್ಯದಿಂದ ಆಗಿದೆ ಎಂದು ಜನ ಆಕ್ರೋಶ ಹೊರಹಾಕಿದ್ದಾರೆ.


