ನವದೆಹಲಿ: ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಒಬ್ಬ ಮಹಿಳೆ ಸೀಮಾ, ಸ್ವೀಟಿ, ಸರಸ್ವತಿ ಸೇರಿದಂತೆ ಹಲವು ಹೆಸರಿನಲ್ಲಿ 22 ಬಾರಿ ಮತ ಚಲಾಯಿಸಿದ್ದಾಳೆ, 10 ಬೂತ್ ನಲ್ಲಿ ಮತ ಚಲಾವಣೆಯಾಗಿದೆ.
ಈ ಮಹಿಳೆ ಬ್ರೇಜಿಲ್ನ ಮಾಡೆಲ್ ಅನ್ನೋದು ನಂತರ ಗೊತ್ತಾಗಿದೆ. ಹರ್ಯಾಣದಲ್ಲ 25 ಲಕ್ಷ ಮತ ಕಳ್ಳತನ ಆಗಿದೆ ಅನ್ನೋದಕ್ಕೆ ಈಕೆಯೇ ಉದಾಹರಣೆ ಎಂದು ದಾಖಲೆ ಸಮೇತ ತೋರಿಸಿದ್ದಾರೆ.
ಕಾಂಗ್ರೆಸ್ ಕೇವಲ 22,779 ಮತಗಳಿಂದ ಸೋತಿದೆ. ಆದ್ರೆ ಒಟ್ಟು 1.18 ಲಕ್ಷ ಮತಗಳು ವ್ಯತ್ಯಾಸ ಇದೆ. ಅಷ್ಟೇ ಅಲ್ಲ ಹರಿಯಾಣದಲ್ಲಿ 25 ಲಕ್ಷ ಮತಗಳ ಕಳ್ಳತನ ನಡೆದಿದೆ. ಶೇ.12.5 ರಷ್ಟು ನಕಲಿ ಮತಗಳು, 93,000 ವಿಳಾಸಗಳು ಅಮಾನ್ಯವಾದವುಗಳು ಎಂದು ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ.
ಒಂದೇ ಗುರುತಿನಲ್ಲಿ ಹಲವು ಮತಗಳನ್ನ ಚಲಾಯಿಸಲು ನಕಲಿ ಫೋಟೋಗಳನ್ನ ಬಳಸಲಾಗಿದೆ. ಹರಿಯಾಣ ಚುನಾವಣೆಯ 2 ಕೋಟಿ ಮತಗಳಲ್ಲಿ 25 ಲಕ್ಷ ಮತಗಳು ಕಳ್ಳತನವಾಗಿದೆ. ಪ್ರತಿ 8 ಮತದಾರರಲ್ಲಿ ಒಂದು ಮತ ನಕಲಿ ಆಗಿದೆ. ಒಂದು ಗುರುತಿನ ಚೀಟಿಯಲ್ಲಿ ಒಂದೇ ಕ್ಷೇತ್ರದಲ್ಲಿ ನೂರು ಮತಗಳು ಕಂಡುಬಂದಿವೆ ಇವೆಲ್ಲವೂ ಮತಗಳ್ಳತನಕ್ಕೆ ಉದಾಹರನೆ ಎಂದು ರಾಗಾ ಬಾಂಬ್ ಹಾಕಿದರು.


