ಬಿಹಾರ: ಆರ್ಜೆಡಿ ಬಿಹಾರದಲ್ಲಿ ಅಭಿವೃದ್ಧಿಯ ವಾತಾವರಣವನ್ನು ನಾಶಮಾಡಿತು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ಧಾಳಿ ನಡೆಸಿದ್ದಾರೆ. ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ಸೀತಾಮರ್ಹಿ ಮತ್ತು ಬೆಟ್ಟಿಯಾದಲ್ಲಿ ಸಾರ್ವಜನಿಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು,
ಬಿಹಾರದಲ್ಲಿ ಜಂಗಲ್ ರಾಜ್ ಬಂದ ತಕ್ಷಣ, ರಾಜ್ಯದಲ್ಲಿ ವಿನಾಶದ ಯುಗ ಪ್ರಾರಂಭವಾಯಿತು. ಆರ್ಜೆಡಿ ಬಿಹಾರದಲ್ಲಿ ಅಭಿವೃದ್ಧಿಯ ವಾತಾವರಣವನ್ನು ನಾಶಮಾಡಿತು. ಆರ್ಜೆಡಿ ಮತ್ತು ಕಾಂಗ್ರೆಸ್ ಜನರಿಗೆ ಕೈಗಾರಿಕೆಗಳ ಎಬಿಸಿ ಕೂಡ ತಿಳಿದಿಲ್ಲ. ಅವರು ಕೈಗಾರಿಕೆಗಳನ್ನು ಮುಚ್ಚಲು ಮಾತ್ರ ಬಯಸುತ್ತಾರೆ ಎಂದರು.
ಇನ್ನೂ 15 ವರ್ಷಗಳಲ್ಲಿ ಬಿಹಾರದಲ್ಲಿ ಯಾವುದೇ ದೊಡ್ಡ ಆಸ್ಪತ್ರೆ ಅಥವಾ ಕಾರ್ಖಾನೆಯನ್ನು ನಿರ್ಮಿಸಲಾಗಿಲ್ಲ. ಆದ್ದರಿಂದ, ಜಂಗಲ್ ರಾಜ್ ಜನರ ಬಾಯಿಂದ ಅಭಿವೃದ್ಧಿಯ ಮಾತು ಬರೀ ಸುಳ್ಳು. ಬಿಹಾರದ ಜನರು ಸರ್ಕಾರದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದರು. ನಿತೀಶ್ ಕುಮಾರ್ ಈ ನಂಬಿಕೆಯನ್ನು ಮರಳಿ ತಂದರು. ಬಿಜೆಪಿ ಮತ್ತು ಎನ್ಡಿಎ ಸರ್ಕಾರ ತಾನು ಹೇಳಿದ್ದನ್ನು ಮಾಡಿ ತೋರಿಸುತ್ತದೆ ಎಂದರು.


