ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೊಮ್ಮೆ ರಾಜಾತಿಥ್ಯ ಪ್ರಕರಣ ಬೆಳಕಿಗೆ ಬಂದಿದೆ. ಉಗ್ರರಿಗೆ ಸೌಲಭ್ಯ ಕಲ್ಪಿಸಿರುವ ಆರೋಪದ ಹಿನ್ನೆಲೆ ಜೈಲು ಆಡಳಿತದ ಕಾರ್ಯ ವೈಖರಿ ಮತ್ತೊಮ್ಮೆ ಪ್ರಶ್ನಾರ್ಥಕವಾಗಿದೆ. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೈಲುಗಳಲ್ಲಿ ಅನೇಕ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದೆ ಎಂದು ವರದಿ ಆಗಿದೆ. ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದೇವೆ. ನನಗೆ ಅನೇಕ ಮಾಹಿತಿಗಳು ಬಂದಿವೆ ಅದೆಲ್ಲವನ್ನು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಈಗಾಗಲೇ ಮುಖ್ಯಮಂತ್ರಿಗಳು ಕೂಡ ಸೂಚನೆ ಕೊಟ್ಟಿದ್ದಾರೆ. ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಆಗಬೇಕು ಎಂದು ಹೇಳಿದ್ದಾರೆ.
ಇನ್ನೂ ಇವತ್ತು ಮೀಟಿಂಗ್ ಕರೆದಿರುವುದೇ ಕ್ರಮಕೈಗೊಳ್ಳುವ ಉದ್ದೇಶಕ್ಕಾಗಿ. ಮೊದಲೆಲ್ಲಾ ಡಿಜಿ ಕರೆದು ಸೂಚನೆ ಕೊಡುತ್ತಿದ್ವಿ. ಇವತ್ತು ಎಲ್ಲಾ ಸೂಪರಿಡೆಂಟ್ಗಳನ್ನ ಕರೆದಿದ್ದೇವೆ. ಪ್ರಮುಖ ಜೈಲಿನ ಎಲ್ಲಾ ಸೂಪರಿಡೆಂಟ್ ಗಳನ್ನ ಕರೆದಿದ್ದೇವೆ. ನಮ್ಮ ಕಮಿಷನರ್ ಗೆ ಸೂಚನೆ ಕೊಟ್ಟು ಕೆಲ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.



