ಚಿನ್ನ ಬರೀ ಅಲಂಕಾರಕ್ಕಾಗಿ ಅಲ್ಲ, ಇದು ಆಪತ್ಕಾಲದ ಬಂಧುವಾಗಿ ಜನರ ಜೀವನದಲ್ಲಿ ಮುಖ್ಯವಾಗಿದೆ. ಯಾವುದೇ ಹಣದ ಸಮಸ್ಯೆ ಬಂದರೂ ಚಿನ್ನ ಅಡವಿಟ್ಟು, ಮಾರಿಯಾದರೂ ಹಣ ಪಡೆದುಕೊಳ್ಳಬಹುದು ನಮ್ಮೆಲ್ಲರ ಉದ್ದೇಶ. ಅದಕ್ಕಾಗಿ ಚಿನ್ನ ಪ್ರಮುಖ ಲೋಹವಾಗಿ ಗುರುತಿಸಿಕೊಳ್ಳುತ್ತಿದೆ.
ಭಾರತೀಯರಿಗೆ ಅದರಲ್ಲೂ ಮಹಿಳೆಯರಿಗೆ ಚಿನ್ನ ಅಂದರೆ ಪ್ರೀತಿ. ಯಾವುದೇ ಸಮಾರಂಭ ಇರಲಿ, ಹಬ್ಬವಿರಲಿ ಅವರು ಮೊದಲು ಕೇಳುವುದೇ ಚಿನ್ನ. ಈ ಹಬ್ಬಕ್ಕಾದ್ರೂ ಒಂದು ಸ್ವಲ್ಪ ಬಂಗಾರ ತೆಗೆದುಕೊಳ್ಳೋಣ ಅನ್ನೋ ಬೇಡಿಕೆ ಇವರ ಬಾಯಲ್ಲಿ ಬರುತ್ತದೆ. ಸದ್ಯ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಜಂಪ್ ಆಗಿದೆ. ಒಂದೇ ದಿನಕ್ಕೆ 1200 ರೂ ಹೆಚ್ಚಾಗುವ ಮೂಲಕ ಗರಿಷ್ಠ ಮಟ್ಟಕ್ಕೇರಿಕೆ ಆಗಿದೆ.
ವೀಕೆಂಡ್‌ನಲ್ಲಿ ತಟಸ್ಥವಾಗಿದ್ದ ಚಿನ್ನದ ಬೆಲೆ ನವೆಂಬರ್ 2 ನೇ ವಾರದಲ್ಲಿ ಭಾರಿ ಜಿಗಿತ ಕಂಡಿದೆ. ನವೆಂಬರ್ 10 ಸೋಮವಾರದಂದು ದೇಶೀಯ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,322 ರೂಪಾಯಿ ಇದ್ದು, ಇಂದು 120 ರೂಪಾಯಿ ಹೆಚ್ಚಳ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,23 220 ರೂಪಾಯಿ ಇದೆ. 24 ಕ್ಯಾರೆಟ್ ಬೆಲೆಯಲ್ಲಿ ಇಂದು ಒಟ್ಟು 1200 ರೂ ಹೆಚ್ಚಳ ಆಗಿದೆ.
22 ಕ್ಯಾರೆಟ್ 1 ಗ್ರಾಂ ಬೆಲೆ 11,295 ರೂಪಾಯಿ ಇದ್ದು, 110 ರೂ ಹೆಚ್ಚಳ ಕಂಡಿದೆ. 10 ಗ್ರಾಂ ಬೆಲೆ 1,12,950 ರೂಪಾಯಿ ಇದೆ. ಇಂದು 1,100 ರೂ ಏರಿಕೆ ಆಗಿದೆ.ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 12322 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,23,220 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ. ಬೆಳ್ಳಿ ಬೆಲೆ ಇಂದು ಭಾರಿ ಏರಿಕೆ ಆಗಿದ್ದು, ಗ್ರಾಂ ನಲ್ಲಿ ಎರಡುವರೇ ರೂಪಾಯಿ ಹೆಚ್ಚಳ ಆಗಿ 155 ರೂಪಾಯಿಯಾಗಿದ್ದು, ಕೆಜಿಗೆ 1,55,000 ರೂ ಇದೆ.


