ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಕೈಯಲ್ಲಿ ಸ್ಮಾರ್ಟ್ ಫೋನ್ ಹಾಗೂ ಡ್ರಿಂಕ್ಸ್ ಪಾರ್ಟಿ ವಿಡಿಯೋ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲೇ ಟೆರೆರಿಸ್ಟ್‌ಗಳನ್ನ ಇಟ್ಕೊಂಡು ಪರಪ್ಪನ ಅಗ್ರಹಾರದ ಟೆರೆರಿಸ್ಟ್‌ಗಳ ಬಗ್ಗೆ ಏನು ಚರ್ಚೆ ಮಾಡ್ತೀರಾ ಎಂದು ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
ಪರಪ್ಪನ ಅಗ್ರಹಾರದಲ್ಲಿ ಅಪರಾಧ ಮಾಡಿರುವವರ ರಕ್ಷಣೆಗೆ ಎಲ್ಲಾ ರೀತಿ ಸೌಲಭ್ಯಗಳನ್ನ ಕೊಡ್ತಿದ್ದಾರೆ. 3-4 ದಿನಗಳಿಂದ ವಿಡಿಯೋ ಹರಿದಾಡುತ್ತಿದೆ. ಸೆಂಟ್ರಲ್ ಜೈಲ್‌ನಲ್ಲಿ ಇದೇನು ಹೊಸದಲ್ಲ. ಹಿಂದೆ ಹಿರಿಯ ಅಧಿಕಾರಿಗಳ ನಡುವೆ ಘರ್ಷಣೆ ಆದಾಗ ದೊಡ್ಡ ರಾಜಕೀಯ ಆಗಿತ್ತು. ವಿಧಾನಸೌಧದಲ್ಲೇ ಟೆರೆರಿಸ್ಟ್‌ಗಳನ್ನ ಇಟ್ಕೊಂಡು ಪರಪ್ಪನ ಅಗ್ರಹಾರದ ಟೆರೆರಿಸ್ಟ್‌ಗಳ ಬಗ್ಗೆ ಏನು ಚರ್ಚೆ ಮಾಡ್ತೀರಾ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಗೃಹ ಸಚಿವರು ತನಿಖೆ ಮಾಡಿ, ಸತ್ಯಾಸತ್ಯತೆ ತಿಳಿದುಕೊಳ್ತೀನಿ ಅಂದಿದ್ದಾರೆ. ಜೈಲಿನಲ್ಲಿ ಏನ್ ನಡೆಯುತ್ತೆ ಅನ್ನೋದು ಪರಮೇಶ್ವರ್ ಅವರಿಗೆ ಗೊತ್ತಿಲ್ಲವಾ? ಮಾಧ್ಯಮಗಳಲ್ಲಿ ಯಾವ ರೀತಿ ಖೈದಿಗಳಿಗೆ ಸೌಲಭ್ಯ ಕೊಟ್ಟಿದ್ದಾರೆ ಅಂತ ವಿಡಿಯೋ ಬರ್ತಿದೆ. ರಾಜ್ಯದ ಜನತೆ ಮುಂದೆ ಎಲ್ಲವನ್ನು ತೋರಿಸಿದ್ದಾರೆ. ಹೀಗೆ ಇರೋವಾಗ ಯಾರ ಬಗ್ಗೆ ಯಾವ ವಿಷಯಕ್ಕೆ ತನಿಖೆ ಮಾಡ್ತೀರಾ ನೀವು? ನಿಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆ. ತನಿಖೆ ಮತ್ತೆ ಮಾಡಿ ಏನ್ ಮಾಡ್ತೀರಾ? ಎಂದು ವಾಗ್ದಾಳಿ ನಡೆಸಿದ್ದಾರೆ.


