ಬೆಂಗಳೂರು:ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಖೈದಿಗಳಿಗೆ ಐಷಾರಾಮಿ ಸವಲತ್ತುಗಳು ಮತ್ತು ರಾಜಾತಿಥ್ಯ ದೊರಕುತ್ತಿದ್ದ ಪ್ರಕರಣವು ರಾಜ್ಯದ ಪ್ರಮುಖ ಚರ್ಚೆಯ ವಿಷಯವಾಗಿದೆ. ಈ ಸಮಸ್ಯೆಯ ಬಗ್ಗೆ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
Advertisement
ಕಾಂಗ್ರೆಸ್ ಉಗ್ರವಾದದ ಮೇಲೆ ಸಾಫ್ಟ್ ಕಾರ್ನರ್ ತೋರಿಸುತ್ತಿದೆ. ಇದು ಜೈಲನ್ನು ಪಾರ್ಟಿ ಹೌಸ್ ಆಗಿ ಪರಿವರ್ತಿಸುವ ಕಾಂಗ್ರೆಸ್‌ನ ಹೊಸ ಗ್ಯಾರಂಟಿ ಎಂದರು. ಜೈಲಿನ ಒಳಗಿನಿಂದ ರೆಕಾರ್ಡ್ ಆದಂತೆ ಕಾಣುವ ವಿಡಿಯೋ ಕ್ಲಿಪ್‌ಗಳನ್ನು ಪ್ರದರ್ಶಿಸಿದ ಅವರು,
ಐಸಿಸ್ ರಿಕ್ರೂಟರ್ ಎಂದು ಹೇಳಲಾದ ಝುಹಾಬ್ ಹಮೀದ್ ಶಕೀಲ್ ಮನ್ನಾ ಮೊಬೈಲ್ ಫೋನ್ ಬಳಸುತ್ತಿರುವುದು ಕಂಡುಬಂದಿದೆ. ಇಂತಹ ಉಗ್ರರನ್ನು ಹೈ-ಸೆಕ್ಯುರಿಟಿ ಸೆಲ್‌ಗಳಲ್ಲಿ ಇರಿಸಬೇಕು. ಆದರೆ ಅವರು ಫೋನ್ ಬಳಸಿ ಹೊರಗೆ ಸಂಪರ್ಕಿಸುತ್ತಾ ರಿಕ್ರೂಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


