ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಅಭಿವೃದ್ಧಿ ಹಾಗೂ ಸುರಕ್ಷತೆಯ ವಿಷಯದಲ್ಲಿ ಬಿಜೆಪಿ ಹೊಂದಿರುವ ಬದ್ಧತೆಗೆ ಚುನಾವಣೆ ಫಲಿತಾಂಶದ ಮೂಲಕ ಆಶೀರ್ವದಿಸಿ ಐತಿಹಾಸಿಕ ಗೆಲುವಿಗೆ ಕಾರಣರಾದ ಸಮಸ್ತ ಬಿಹಾರ ಜನತೆಗೆ ಅಭಿನಂದನೆಗಳು ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ 50-60 ವರ್ಷಗಳಿಂದ ಬಿಹಾರದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿತ್ತು. ಕಾಂಗ್ರೆಸ್ ನೇತೃತ್ವ ಅಥವಾ ಅವರ ಸಹಯೋಗಿ ಪಕ್ಷಗಳ ಆಡಳಿತ ಬಡವರ ಕಲ್ಯಾಣವನ್ನು ಮಾಡದೆ ಉಳ್ಳವರ ಪರವಾಗಿದ್ದವಲ್ಲದೇ ಗೂಂಡಾ ರಾಜ್ಯವನ್ನಾಗಿ ಮಾರ್ಪಡಿಸಿದ್ದು ಬಿಹಾರಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಕಳೆದ 10-15 ವರ್ಷಗಳಲ್ಲಿ ಬಿಜೆಪಿ ಜೊತೆಗೂಡಿದ ಎನ್‌ಡಿಎ ಮೈತ್ರಿಕೂಟ ಸರ್ಕಾರ ಪ್ರಾಮಾಣಿಕ ಆಡಳಿತ ಮಾಡಿದ್ದರಿಂದಲೇ ಈ ಫಲಿತಾಂಶ ಬರಲು ಸಾಧ್ಯವಾಗಿದೆ.
ಸದರಿ ಜಯಕ್ಕೆ ಕಾರಣರಾದ ಪ್ರಧಾನಿ ಮೋದೀಜಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹಮಂತ್ರಿ ಅಮಿತ್ ಶಾ, ಮುಖ್ಯಮಂತ್ರಿ ನೀತೀಶಕುಮಾರ್ ಹಾಗು ಮೈತ್ರಿಕೂಟದ ಎಲ್ಲ ನಾಯಕರಿಗೂ ಅಭಿನಂದನೆಗಳು ಎಂದು ಲಿಂಗರಾಜ ಪಾಟೀಲ ಮಲ್ಲಾಪೂರ ತಿಳಿಸಿದ್ದಾರೆ.



