ಹಾಡಹಗಲೇ ದರೋಡೆ, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ: ನಿಖಿಲ್ ಕುಮಾರಸ್ವಾಮಿ ಕಿಡಿ

0
Spread the love

ಬೆಂಗಳೂರು: ಉಪಮುಖ್ಯಮಂತ್ರಿಗಳೇ ಕಸ ಗುಡಿಸುವ ಯಂತ್ರಗಳ ಬಗ್ಗೆ ನಾನು ಒಬ್ಬ ಸಾಮಾನ್ಯ ಪ್ರಜೆಯಾಗಿ ಪ್ರಶ್ನೆ ಮಾಡಿದ್ದೇನೆ.ನಿಮಗೆ ಪ್ರಶ್ನೆ ಮಾಡಿದ್ದಲ್ಲ,ನೀವು ಕುಳಿತಿರುವ ಹುದ್ದೆ ಬೆಂಗಳೂರು ಉಸ್ತುವಾರಿಯವರಿಗೆ ಕೇಳಿದ್ದು ಎಂದು ಡಿ.ಕೆ ಶಿವಕುಮಾರ್ ಹೇಳಿಕೆ ಟಾಂಗ್ ನೀಡಿದರು.

Advertisement

ಹುಬ್ಬಳ್ಳಿ ಧಾರವಾಡದಲ್ಲಿ ಇದೇ ಸರ್ಕಾರ ಕಸ ಗುಡಿಸುವ ಮಷಿನ್ ನನ್ನ, 01 ಕೋಟಿ 45 ಲಕ್ಷಕ್ಕೆ 2 ಮಷಿನ್ ಖರೀದಿ ಮಾಡಿದ್ರು, ಯಾಕೆ ಬೇಕಾ ಬಿಟ್ಟಯಾಗಿ 613 ಕೋಟಿ ರೂ ವೆಚ್ಚ ವನ್ನ ಖರ್ಚು ಮಾಡಿ ಬಾಡಿಗೆ ತಗೋತೀರಾ.? ಸ್ವಂತಕ್ಕೆ ಖರೀದಿ ಮಾಡಬಹುದೆಂದು ವರದಿ ನೀಡಿದೆ. ಇದಕ್ಕೆ ಉತ್ತರ ಕೊಡಿ ಲೋಕಯುಕ್ತಗೆ ಯಾಕೆ ಹೋಗ್ಬೇಕು.? ನಿಮಗೆ ಪರಿಜ್ಞಾನ ಇಲ್ವಾ.? ಎಂದು ಡಿಕೆ ಶಿವಕುಮಾರ್ ವಿರುದ್ಧ ನಿಖಿಲ್ ಅವರು ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ 2028 ಚುನಾವಣೆ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷವಾಗಿ ಉಳಿಯೋದಿಲ್ಲ. ಬಿಹಾರದ ಚುನಾವಣೆಯಲ್ಲಿ NDA ಮೈತ್ರಿಯನ್ನ ಒಪ್ಪಿಕೊಂಡಿದ್ದಾರೆ. ಇದು ಕಾಂಗ್ರೆಸ್ ಪತನದ ದಿನಗಳು ಅಂತ ಜನರು ಸಂದೇಶ ಕೊಟ್ಟಿದ್ದಾರೆ. ಈ‌ ಸಂದೇಶ ಕಾಂಗ್ರೆಸ್ ನಾಯಕರಿಗೆ ‌ನಿದ್ದೆಗೆಡಿಸಿದೆ ಎಂದು ಹೇಳಿದರು.

ಒಂದಂಕಿಗೆ ಕಾಂಗ್ರೆಸ್ ಬಂದು ನಿಂತಿದೆ

JDS ಪಕ್ಷದ ಬಗ್ಗೆ ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕರು ಮಾತಾಡಿದ್ರು. 18 ಇದೆ ಒಂದಂಕಿಗೆ ಬಂದು ಜೆಡಿಎಸ್ ನಿಲ್ಲುತ್ತದೆ ಎಂದು ಲೇವಡಿ ಮಾಡಿದ್ರು. ಈಗ ಒಂದಂಕಿಗೆ ಕಾಂಗ್ರೆಸ್ ಬಂದು ನಿಂತಿದೆ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷದ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು. ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷವಾಗಿ ಉಳಿಯೋದಿಲ್ಲ. ಈಗಲಾದರೂ ಕಾಂಗ್ರೆಸ್‌ನವರು ಎಚ್ಚೆತ್ತುಕೊಳ್ಳಬೇಕು. ಇನ್ನೊಂದು ಪಕ್ಷವನ್ನು ಲಘುವಾಗಿ ತಗೊಳ್ಳೋದು, ಅವಹೇಳನ ಮಾಡೋದು ಬಿಡಬೇಕು. ಜನತೆ ಅಧಿಕಾರ ಕೊಟ್ಟಾಗ ಕಾಂಗ್ರೆಸ್ ಅವರು ತಗ್ಗಿ ಬಗ್ಗಿ ಅಧಿಕಾರ ನಡೆಸಬೇಕು ಅಂತ ಪರೋಕ್ಷವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ದರೋಡೆ ಪ್ರಕರಣ ವಿಚಾರ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಜನರಿಗೆ ಆತಂಕ ಶುರುವಾಗಿದೆ. ಗೃಹ ಸಚಿವರು ಯಾವಾಗ ಎಡವಟ್ಟು ಆದ್ರು ಗೊತ್ತಿಲ್ಲಾ ಅಂತಾರೆ. ಇದು ಗೊತ್ತಿಲ್ಲದೆ ಇರುವ ಸರ್ಕಾರ ಆಗಿದೆ. ಗೃಹ ಸಚಿವರು ಈ ವಿಚಾರವನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು

ಸರ್ಕಾರಕ್ಕೆ 2.5 ವರ್ಷ ತುಂಬಿರುವ ವಿಚಾರಕ್ಕೆ ಮಾತನಾಡಿದ ಅವರು. ಇದು ಕೇವಲ ಜಾಹೀರಾತುಗಳಿಗೆ ಸೀಮಿತವಾಗಿರುವ ಸರ್ಕಾರ. ರಾಜ್ಯದ ಜನರ ತೆರಿಗೆ ಹಣವನ್ನು ಉಪಯೋಗ ಮಾಡಿಕೊಳ್ತಿದ್ದಾರೆ. ವೈಪಲ್ಯಗಳು ಮತ್ತು ಭ್ರಷ್ಟಾಚಾರಕ್ಕೆ ಉತ್ತರ ಕೊಡಬೇಕು. ಅಭಿವೃದ್ಧಿ ಅನ್ನೋದು ರಾಜ್ಯದಲ್ಲಿ ಶೂನ್ಯವಾಗಿದೆ ಎಂದು ನಿಖಿಲ್ ಅವರು ತೀವ್ರ ವಾಗ್ದಾಳಿ ನಡೆಸಿದರು.

ದೇವೇಗೌಡರ ಹಾಗೂ ಕುಮಾರಣ್ಣನ ಸಾಧನೆ ಎಕ್ಸಿಬಿಷನ್ ಮಾಡುತ್ತೇವೆ

ಮಾಜಿ ಪ್ರಧಾನಿ ಹೋರಾಟದ ಪ್ರತಿಫಲವಾಗಿ ಪ್ರಾದೇಶಿಕ ಪಕ್ಷ ಸ್ಥಾಪನೆ ಆಯ್ತು. ಚುನಾವಣೆಗಳಲ್ಲಿ ಸೋಲು ಗೆಲವು ನೊಡಿರುವ ಪಕ್ಷ. ಸೋಲಿನಿಂದ ನಮ್ಮ ನಾಯಕರು, ಕಾರ್ಯಕರ್ತರು ಕುಗ್ಗಿಲ್ಲ. ಬದಲಾಗಿ ಪಕ್ಷವನ್ನ ಬಲವಾಗಿ ಕಟ್ಟುತ್ತೇವೆ ಎಂಬ ಆತ್ಮಸ್ಥೈರ್ಯ ಇದೆ ಎಂದು ಹೇಳಿದರು.

ಇದೇ (ನಾಳೆ) ನ. 21 ಮತ್ತು 22 ರಂದು ಜೆಡಿಎಸ್ ಪಕ್ಷದ ಬೆಳ್ಳಿಹಬ್ಬ ಕಾರ್ಯಕ್ರಮ ಇದೆ. ನಾಳೆ ಧ್ವಜಾರೋಹಣ ಇದೆ, ದೇವೇಗೌಡರು, ಹಾಗೂ ಕುಮಾರಣ್ಣ ಮತ್ತು ಬೇರೆ ಬೇರೆ ರಾಜ್ಯದ ಅದ್ಯಕ್ಷರು ಬರ್ತಾರೆ. 21 ರಂದು ಶಾಸಕರ ಸಭೆ ಮಾಡಲಾಗುತ್ತೆ,‌ 22 ರಂದು ರಜತಮಹೋತ್ಸವ ಇದೆ ಎಂದು ಮಾಹಿತಿ ನೀಡಿದರು.

ತಾಲ್ಲೂಕು ಜಿಲ್ಲಾ ಮಟ್ಟದಲ್ಲೂ ವರ್ಷ ಇಡೀ ಆಚರಣೆ ಮಾಡ್ಬೇಕು

ಪ್ರಾದೇಶಿಕ ಪಕ್ಷ ಎರಡು ರಾಷ್ಟ್ರೀಯ ಪಕ್ಷದ ವಿರುದ್ದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ದೇವೇಗೌಡರ ವೈಯಕ್ತಿಕ ಬದುಕು ರಾಜಕೀಯ ನಡೆಯನ್ನ ನಾಳೆ ಎಕ್ಸಿಬಿಷನ್ ಮೂಲಕ ತೋರಿಸಲಾಗುವುದು. ತಾಲ್ಲೂಕು ಜಿಲ್ಲಾ ಮಟ್ಟದಲ್ಲೂ ವರ್ಷ ಇಡೀ ಆಚರಣೆ ಮಾಡಬೇಕೆಂಬ ಆದೇಶವಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.


Spread the love

LEAVE A REPLY

Please enter your comment!
Please enter your name here