ಬೆಂಗಳೂರು: ಸಿಎಂ ಬದಲಾವಣೆ ವಿಷಯದ ಬಗ್ಗೆ ನಮಗೇನು ಗೊತ್ತಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಎರಡುವರೆ ವರ್ಷ ಪೂರ್ಣಗೊಳ್ಳುತ್ತಿದ್ದಂತೆಯೇ ಅಧಿಕಾರ ಹಂಚಿಕೆ ಕಿತ್ತಾಟ ಮುನ್ನೆಲೆಗೆ ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿದ ಅವರು,
ನಮ್ಮಲ್ಲಿ ಯಾವುದೇ ಬಣ ಇಲ್ಲ. ನಾನು ಯಾರ ಬಣದಲ್ಲಿ ಇಲ್ಲ. ದೆಹಲಿಗೆ ಶಾಸಕರು ಯಾಕೆ ಹೋಗಿದ್ದಾರೆ ಅಂತ ಗೊತ್ತಿಲ್ಲ. ಸಿಎಂ ಬದಲಾವಣೆ ವಿಷಯದ ಬಗ್ಗೆ ನಮಗೇನು ಗೊತ್ತಿಲ್ಲ. 2.5 ವರ್ಷ ಅಗ್ರಿಮೆಂಟ್ ವಿಷಯ ನಮಗೇನು ಗೊತ್ತಿಲ್ಲ ಎಂದರು.
ಮಲ್ಲಿಕಾರ್ಜುನ ಖರ್ಗೆ ನಮ್ಮ ಅಧ್ಯಕ್ಷರು. ಅವರನ್ನ ಸಿಎಂ, ಡಿಸಿಎಂ ಮಾತಾಡೋದು ವಿಶೇಷ ಏನು ಅಲ್ಲ. ಏನಾದರು ಗೊಂದಲಗಳು ಇದ್ದರೆ ಹೈಕಮಾಂಡ್ ಅದನ್ನ ಸರಿ ಮಾಡುತ್ತದೆ. ಡಿಕೆ ಸುರೇಶ್ ಯಾಕೆ ಸಿಎಂ ಮಾತಿನ ಬಗ್ಗೆ ಮಾತಾಡಿದ್ರೋ ನನಗೆ ಗೊತ್ತಿಲ್ಲ. ನಾವೆಲ್ಲರು ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದರು.


