ಅಯೋಧ್ಯೆ: 500 ವರ್ಷಗಳಲ್ಲಿ ಒಂದು ಕ್ಷಣವೂ ವಿಚಲಿತವಾಗದೆ ನಡೆಸಿದ ಯಾಗ ಇದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಯೋಧ್ಯೆ ರಾಮ ಮಂದಿರದಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಇಂದು ಅಯೋಧ್ಯೆ ನಗರ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ.
ಸಂಪೂರ್ಣ ಭಾರತ, ವಿಶ್ವ ರಾಮಮಯವಾಗಿದೆ. 500 ವರ್ಷಗಳ ಯಜ್ಞ ಇಂದು ಪೂರ್ಣಗೊಂಡಿದೆ. ರಾಮ ಭಕ್ತರ ಮನಸ್ಸಿನಲ್ಲಿ ಅಪಾರ ಆನಂದವಿದೆ. ವರ್ಷಗಳ ಪ್ರಾರ್ಥನೆ ಇಂದು ಸಿದ್ಧಿಯಾಗಿದೆ.
ಇದು ಕೇವಲ ಧ್ವಜ ಅಲ್ಲ, ಭಾರತೀಯ ಸಭ್ಯತೆಯ ಪ್ರತೀಕ. ಈ ಧ್ವಜ ರಾಮರಾಜ್ಯವನ್ನು ಪ್ರತಿರೂಪಿಸುತ್ತದೆ. ಈ ಧ್ವಜ ಸಂತರ ಸಾಧನೆ, ಶ್ರೀರಾಮನ ಆದರ್ಶದ ಉದ್ಘೋಷವಾಗಿದೆ. ಧ್ವಜ ರಾಮ ಮಂದಿರದ ಕಿರೀಟ. ಗೆಲುವು ಸತ್ಯಕ್ಕೆ ಸಿಗಲಿದೆ ಎಂದರು.
ಶ್ರೀ ರಾಮ ಜನ್ಮಭೂಮಿ ದೇವಾಲಯದ ಶಿಖರದಲ್ಲಿ ಧ್ವಜಾರೋಹಣ ಸಮಾರಂಭದ ಈ ಕ್ಷಣ ವಿಶಿಷ್ಟ ಮತ್ತು ಅಲೌಕಿಕವಾಗಿದೆ.ಈ ಧರ್ಮ ಧ್ವಜವು ಕೇವಲ ಧ್ವಜವಲ್ಲ. ಇದು ಭಾರತೀಯ ನಾಗರಿಕತೆಯ ಪುನರುಜ್ಜೀವನದ ಧ್ವಜವಾಗಿದೆ.
ಈ ಧ್ವಜವು ಹೋರಾಟದ ಮೂಲಕ ಸೃಷ್ಟಿಯ ಕಥೆಯಾಗಿದೆ, ಶತಮಾನಗಳಿಂದ ನಡೆಯುತ್ತಿರುವ ಕನಸುಗಳ ಸಾಕಾರವಾಗಿದೆ. ಶತಮಾನಗಳ ನೋವು ಇಂದು ಕೊನೆಗೊಳ್ಳುತ್ತಿದೆ, ಶತಮಾನಗಳ ಸಂಕಲ್ಪ ಇಂದು ಯಶಸ್ಸನ್ನು ಸಾಧಿಸುತ್ತಿದೆ ಎಂದು ಹೇಲೀದರು.



