ತುಮಕೂರು:- ಉಪಮುಖ್ಯಮಂತ್ರಿ ಡಿಕೆಶಿ ಬಾಹ್ಯ ಬೆಂಬಲ ಕೊಟ್ಟರೆ ನಾವು ಸರ್ಕಾರ ರಚನೆ ಮಾಡ್ತೀವಿ ಎಂದು ಮಾಜಿ ಸಿಎಂ ಸದಾನಂದ ಗೌಡ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಧೋರಣೆಯಿಂದ ಬೇಸತ್ತು ಡಿ.ಕೆ.ಶಿವಕುಮಾರ್ ನಮಗೆ ಬಾಹ್ಯ ಬೆಂಬಲ ಕೊಟ್ಟರೆ ನಾವು ಸರ್ಕಾರ ರಚನೆ ಮಾಡಲು ಸಿದ್ಧರಿದ್ದೇವೆ. ಆದರೆ ನಮ್ಮ ಬೆಂಬಲದೊಂದಿಗೆ ಡಿಕೆಶಿ ಸಿಎಂ ಆಗಬಹುದಾ ಅನ್ನೋದನ್ನು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಸದ್ಯ ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಬಿಜೆಪಿಯತ್ತ ಜನರ ಒಲವಿದೆ. ಈ ವೇಳೆ ಹೈಕಮಾಂಡ್ ಡಿಕೆಶಿಗೆ ಸಪೋರ್ಟ್ ಮಾಡುವ ತಪ್ಪುವ ನಿರ್ಧಾರ ಕೈಗೊಳ್ಳಲ್ಲ ಅನ್ನೋದು ನನ್ನ ನಂಬಿಕೆ ಎಂದರು.
ಡಿಕೆಶಿ ಬಳಿ 70 ಜನ ಶಾಸಕರ ಬೆಂಬಲ ಇದ್ರೆ ಅವರ ಹೈಕಮಾಂಡೇ ಅವರನ್ನು ಸಿಎಂ ಮಾಡುತಿತ್ತು ಅಲ್ಲವೇ? ರಾಜ್ಯದಲ್ಲಿ ಪರ್ಯಾಯ ವ್ಯವಸ್ಥೆ ಕುರಿತು ಕೇಂದ್ರ ಸಚಿವ ವಿ ಸೋಮಣ್ಣ ಕೊಟ್ಟಿರುವ ಹೇಳಿಕೆ ಸತ್ಯವಾಗಿರಬಹುದು. ಆದಾಗ್ಯೂ ಮಧ್ಯಂತರ ಚುನಾವಣೆ ಆಗೋದನ್ನು ನಾನು ವಿರೋಧಿಸುತ್ತೇನೆ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಹೇಳಿದರು.



