ವಿಜಯಸಾಕ್ಷಿ ಸುದ್ದಿ, ರೋಣ: ಬಗದಾಳ ಕಿನಾಳ ರಭಸದ ನೀರಿಗೆ ಕೊಚ್ಚಿಹೋಗಿದ್ದ ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದ ಯುವಕ ಬಸವರಾಜ ಶಿರಗೋಜಿ ಕುಟುಂಬಕ್ಕೆ ಶಾಸಕ ಜಿ.ಎಸ್. ಪಾಟೀಲ 2 ಲಕ್ಷ ರೂಗಳ ಚೆಕ್‌ನ್ನು ಮಂಗಳವಾರ ಮೃತ ವ್ಯಕ್ತಿಯ ಪಾಲಕರಿಗೆ ವಿತರಿಸಿ ಸಾಂತ್ವನ ಹೇಳಿದರು.
ಜ.14, 2024ರಂದು ಸವದತ್ತಿ ತಾಲೂಕಿನ ಉಗರಗೋಳ ಬಳಿಯಿರುವ ಬಗದಾಳ ಕಿನಾಳದ ಪ್ರವಾಹದಲ್ಲಿ ಯುವಕ ಬಸವರಾಜ ಕೊಚ್ಚಿಹೋಗಿದ್ದ. ಸಂಪೂರ್ಣ ಮನೆಯ ಜವಾಬ್ದಾರಿಯನ್ನು ಹೊತ್ತಿದ್ದ ಯುವಕನ ಸಾವು ಪಾಲಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಇದನ್ನು ಮನಗಂಡ ಶಾಸಕ ಜಿ.ಎಸ್. ಪಾಟೀಲ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 2 ಲಕ್ಷ ರೂಗಳ ಚೆಕ್‌ನ್ನು ವಿತರಿಸುವ ಜೊತೆಗೆ ಮತ್ತಷ್ಟು ನೆರವು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಪಾಲಕರಾದ ಶೇಖವ್ವ ಶಿರಗೋಜಿ, ಭೀಮಪ್ಪ ಶಿರಗೋಜಿ, ತಾ.ಪಂ ಮಾಜಿ ಸದಸ್ಯ ಅಂದಪ್ಪ ಬಿಚ್ಚೂರ, ಬಸವರಾಜ ನವಲಗುಂದ, ತಹಸೀಲ್ದಾರ ಕಿರಣಕುಮಾರ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.



