ಗದಗ:- ಹೈಕಮಾಂಡ್ ಹೇಳಿದ ಹಾಗೇ ಇಬ್ಬರೂ ಕೇಳ್ತೀವಿ, ಯಾವುದೇ ಗೊಂದಲ ಇಲ್ಲ ಎಂಬ ಸಿಎಂ-ಡಿಸಿಎಂ ಹೇಳಿಕೆ ವಿಚಾರವಾಗಿ ಮಾಜಿ ಸಚಿವ ಬಿ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, “ಈ ವಿಷಯದಲ್ಲಿ ಹೈಕಮಾಂಡ್—ಸುರ್ಜೇವಾಲಾ, ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ—ಸ್ಪಷ್ಟಪಡಿಸಲಿ. ‘ಐದು ವರ್ಷ ಸಿದ್ದರಾಮಯ್ಯನೇ ಸಿಎಂ’ ಅಂತ ಘೋಷಿಸಲಿ, ಅಥವಾ ಅವರನ್ನೇ ಸ್ಥಾನದಿಂದ ತೆಗೆದು ಬಿಡ್ತಿವಿ ಅಂತ ಹೇಳಲಿ. ಮುಂದಿನ ಮುಖ್ಯಮಂತ್ರಿ ಯಾರು—ದಲಿತನಾ, ಮುಂದುವರಿದ ವರ್ಗದವರಾ, ಎಸ್ಟೀನಾ? ಅದನ್ನೂ ಸ್ಪಷ್ಟಪಡಿಸಲಿ. ಘೋಷಣೆ ಮಾಡಿದ್ರೆ ಕದನ ವಿರಾಮ ಆಗುತ್ತದೆ” ಎಂದರು.
“ಬ್ರೇಕ್‌ಫಾಸ್ಟ್ ಮೀಟಿಂಗ್‌ಗಳು, ಲಂಚ್–ಡಿನ್ನರ್ ಮೀಟಿಂಗ್‌ಗಳು—ಇವು ಎಲ್ಲವೂ ನಾಟಕ. ಅಧಿವೇಶನ ಮುಗಿದ ಮೇಲೆ ಮತ್ತೆ ಸಚಿವರು ಸೇರಿ ನಾಟಕ ಮಾಡ್ತಾರೆ” ಎಂದು ಶ್ರೀರಾಮುಲು ವಾಗ್ದಾಳಿ ನಡೆಸಿದರು.



