ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ತೈಲ ಮಾರುಕಟ್ಟೆ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಿಹಿ ಸುದ್ದಿ ನೀಡಿದೆ. ಡಿಸೆಂಬರ್ ತಿಂಗಳ ಆರಂಭದಲ್ಲೇ ಇಂಡಿಯನ್ ಆಯಿಲ್ ಕಾರ್ಪೊರೇಷನ್ 19 ಕೆಜಿಯ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 10-10.50 ರೂ ಇಳಿಕೆ ಮಾಡಿದೆ.
ಹೊಸ ಬೆಲೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.ಬೆಂಗಳೂರಿನಲ್ಲಿ ಈ ಸಿಲಿಂಡರ್ ದರ 10.50 ರೂ ಇಳಿಕೆಯಾಗಿದೆ. ಅಲ್ಲದೆ, 47.5 ಕಿಲೋ ವಾಣಿಜ್ಯಬಳಕೆ ಸಿಲಿಂಡರ್ ದರ 25.50 ರೂ ಇಳಿಕೆಯಾಗಿದೆ. ಗೃಹಬಳಕೆಯ 14.2 ಕಿಲೋ ಹಾಗೂ 5 ಕಿಲೋ ಸಿಲಿಂಡರ್ ದರಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಡಿಸೆಂಬರ್ 1ರಿಂದ 19 ಕಿಲೋ ಕಮರ್ಷಿಯಲ್ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 1,654 ರೂ ಆಗಿದೆ. 47.5 ಕಿಲೋ ಎಲ್‌ಪಿಜಿ ಸಿಲಿಂಡರ್ ಬೆಲೆ 4,132.50 ರೂಗೆ ಇಳಿದಿದೆ. ಇನ್ನು, ಗೃಹಬಳಕೆಯ 14.2 ಕಿಲೋ ಎಲ್‌ಪಿಜಿ ಬೆಲೆ 855.5 ರೂ, ಹಾಗೂ 5 ಕಿಲೋ ಸಿಲಿಂಡರ್ ಬೆಲೆ 318.50 ರೂನಲ್ಲಿ ಮುಂದುವರಿದಿದೆ.
ಬೆಂಗಳೂರಿನಲ್ಲಿ 2025ರ ಡಿ.1 ರಿಂದ ಎಲ್‌ಪಿಜಿ ದರಗಳ ಪಟ್ಟಿ
- 14.2 ಕಿಲೋ ಗೃಹಬಳಕೆ ಎಲ್‌ಪಿಜಿ: 855.50 ರೂ
- 5 ಕಿಲೋ ಗೃಹಬಳಕೆ ಎಲ್‌ಪಿಜಿ: 318.50 ರೂ
- 19 ಕಿಲೋ ವಾಣಿಜ್ಯಬಳಕೆ ಎಲ್‌ಪಿಜಿ: 1,654 ರೂ
- 47.50 ಕಿಲೋ ವಾಣಿಜ್ಯ ಬಳಕೆ ಎಲ್‌ಪಿಜಿ: 4,132.50 ರೂ
ಕಮರ್ಷಿಯಲ್ ಗ್ಯಾಸ್ ಬೆಲೆಗಳಲ್ಲಿ ಸತತ ಇಳಿಕೆ
ಕಳೆದ ಒಂದು ವರ್ಷದಲ್ಲಿ ಕಮರ್ಷಿಯಲ್ ಗ್ಯಾಸ್ ಬೆಲೆ ಭಾರತದಲ್ಲಿ ಬಹುತೇಕ ನಿರಂತರವಾಗಿ ಇಳಿದಿದೆ. ಕಳೆದ 12 ತಿಂಗಳಲ್ಲಿ 10 ಬಾರಿ ಬೆಲೆ ಇಳಿದಿದೆ. ಎರಡು ತಿಂಗಳು ಮಾತ್ರವೇ ಬೆಲೆ ಏರಿಕೆ ಆಗಿದ್ದು. ಜನವರಿಯಲ್ಲಿ ಬೆಂಗಳೂರಿನಲ್ಲಿ 19 ಕಿಲೋ ಸಿಲಿಂಡರ್ ಬೆಲೆ 1,874.50 ರೂ ಇತ್ತು. ಇದೀಗ 1,654 ರೂಗೆ ಇಳಿದಿದೆ. ಒಂದು ವರ್ಷದಲ್ಲಿ ಈ ಕಮರ್ಷಿಯಲ್ ಗ್ಯಾಸ್ ಬೆಲೆ ಸಿಲಿಂಡರ್ಗೆ 220.50 ರೂ ಇಳಿಕೆ ಆಗಿದೆ.
ಇದೇ ವೇಳೆ, ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಈ ಒಂದು ವರ್ಷ ಯಾವುದೇ ಇಳಿಕೆ ಆಗಿಲ್ಲ. ಕಳೆದ ಒಂದು ವರ್ಷದಲ್ಲಿ ಒಮ್ಮೆ 50 ರೂ ಬೆಲೆ ಏರಿಕೆಯೂ ಆಗಿದೆ.
ವಿವಿಧ ನಗರಗಳಲ್ಲಿ 19 ಕಿಲೋ ಎಲ್‌ಪಿಜಿ ದರಗಳು
- ದೆಹಲಿ: 1,580.50 ರೂ
- ಕೋಲ್ಕತಾ: 1,684 ರೂ
- ಮುಂಬೈ: 1,531.50 ರೂ
- ಚೆನ್ನೈ: 1,739.50 ರೂ
- ಬೆಂಗಳೂರು: 1,654 ರೂ



