ಬೆಂಗಳೂರು: ನಮ್ಮ ಹಿರಿಯರ ಕಾಲದಿಂದಲೂ ಚಿನ್ನ ಕೇವಲ ಒಂದು ಆಭರಣವಲ್ಲ, ಅದೊಂದು ಭಾವನಾತ್ಮಕ ಬೆಸುಗೆ. ಹೂಡಿಕೆಯ ವಿಚಾರಕ್ಕೆ ಬಂದರೆ, ಚಿನ್ನವೇ ನಮ್ಮ “ಆಪತ್ಬಾಂಧವ”. ಕಷ್ಟಕಾಲದಲ್ಲಿ ಕೈ ಹಿಡಿಯುವುದೇ ಬಂಗಾರ ಎಂಬ ಮಾತಿದೆ. ಇದೇ ಕಾರಣಕ್ಕೆ,
“ಕೈಯಲ್ಲಿ ನಾಲ್ಕು ಕಾಸು ಸೇರಿದರೆ ಒಂದು ಗ್ರಾಂ ಆದ್ರೂ ಚಿನ್ನ ತೆಗೆದಿಟ್ಟುಕೋ” ಎಂದು ಹಿರಿಯರು ಸಲಹೆ ನೀಡುತ್ತಾರೆ. ಹಾಗಾದರೆ, ಈ ಸಮಯದಲ್ಲಿ ಚಿನ್ನ ಖರೀದಿಗೆ ಮನಸ್ಸು ಮಾಡಿದ್ದರೆ, ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ ಹೇಗಿದೆ? ನೋಡೋಣ ಬನ್ನಿ. ಇದೀಗ ಗರಿಷ್ಠ ಮಟ್ಟ 13,048 ರೂಪಾಯಿಗೆ ಏರಿಕೆ ಆಗಿದೆ.
ಡಿಸೆಂಬರ್ 1 ಸೋಮವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13,048 ರೂಪಾಯಿ ಇದ್ದು, ಇಂದು 66 ರೂಪಾಯಿ ಹೆಚ್ಚಳ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,30,480 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 660 ರೂ ಏರಿಕೆ ಆಗಿದೆ. 22 ಕ್ಯಾರೆಟ್ 1 ಗ್ರಾಂ ಬೆಲೆ 11,960 ರೂಪಾಯಿ ಇದ್ದು, ಇಂದು 60 ರೂ ಹೆಚ್ಚಳ ಆಗಿದೆ. 10 ಗ್ರಾಂ ಬೆಲೆ 1,19,600 ರೂಪಾಯಿ ಇದೆ.
ಇಂದು 10 ಗ್ರಾಂ ನಲ್ಲಿ 600 ರೂ ಹೆಚ್ಚಳ ಆಗಿದೆ. ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 13,048 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,30,480 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ. ಬೆಳ್ಳಿ ಬೆಲೆ ಇಂದು 3 ರೂ ಹೆಚ್ಚಳ ಆಗಿದ್ದು, ಗ್ರಾಂ ಬೆಲೆ 188 ರೂ ಆಗಿದ್ದು, ಕೆಜಿಗೆ 1,88,000 ರೂ ಇದೆ.



