ಚಿಕ್ಕಬಳ್ಳಾಪುರ: ಸಾಲಬಾಧೆಯಿಂದ ವೃದ್ಧ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಪೋಲಂಪಲ್ಲಿ ಗ್ರಾಮದಲ್ಲಿ ನಡೆದಿದೆ.
ಅಶ್ವತ್ಥಪ್ಪ (70) ಮತ್ತು ಹನುಮಕ್ಕ (65) ಆತ್ಮಹತ್ಯೆ ಮಾಡಿಕೊಂಡ ದಂಪತಿಯಾಗಿದ್ದು, ಮೂಲತಃ ಜಂಗಾಲಹಳ್ಳಿ ಗ್ರಾಮದವರಾದ ವೃದ್ಧ ದಂಪತಿಗಳು, ಕುಟುಂಬದ ಆರ್ಥಿಕ ಪರಿಸ್ಥಿತಿ ಹದಗೆಟ್ಟು, ಸಾಲಬಾಧೆ ಹೆಚ್ಚಿದ್ದು,
ಅದರಿಂದ ಬೇಸತ್ತ ಆತ್ಮಹತ್ಯೆಗೆ ಶರಣಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಬೆಳಗ್ಗೆ ಮನೆಯಲ್ಲಿ ಇಬ್ಬರೂ ಮೂರ್ಛೆ ಹೋದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಮಾಹಿತಿ ನೀಡಿದ ನಂತರ ಗುಡಿಬಂಡೆ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.



