ಬೆಂಗಳೂರು : ಕಳೆದ ಮೂರು ದಿನಗಳ ಹಿಂದೆ ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಮೊದಲ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆದಿತ್ತು.
ಇಂದು ಡಿಸಿಎಂ ಡಿಕೆಶಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಶೇಷ ಬ್ರೇಕ್ ಫಾಸ್ಟ್ ರೆಡಿ ಮಾಡಲಾಗಿದ್ದು, ಇದೀಗ ಸದಾಶಿವನಗರದಲ್ಲಿರುವ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದ ಸಿದ್ದರಾಮಯ್ಯ, ನಾಟಿಕೋಳಿ ಸಾರು, ಬಿಸಿ ಬಿಸಿ ಇಡ್ಲಿ ಸವಿದರು. ಜತೆಗೆ ಮಾತುಕತೆಯೂ ನಡೆಯಿತು.
ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನ ಸದಾಶಿವ ನಗರದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಉಪಹಾರ ಕೂಟಕ್ಕೆಂದು ಆಗಮಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನ ಡಿಸಿಎಂ ಡಿಕೆಶಿ ಬಹಳ ಖುಷಿಯಿಂದ ಬರ ಮಾಡಿಕೊಂಡ್ರು. ಇದೇ ವೇಳೆ ಮಾಜಿ ಸಂಸದ ಡಿಕೆ ಸುರೇಶ್ ಅವರು ಸಿಎಂಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ರು. ಬಳಿಕ ಸಿದ್ದರಾಮಯ್ಯ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಬ್ರೇಕ್ಫಾಸ್ಟ್ಗೆಂದೆ ನಾಟಿಕೋಳಿ ರೆಸಿಪಿಗಳನ್ನ ಡಿಕೆಶಿ ಮಾಡಿಸಿದ್ರು. ಮನೆಗೆ ಬಂದ ಸಿಎಂಗೆ ತಾವೇ ಊಟ ಬಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇಡ್ಲಿಗೆ ಚಿಕನ್ ಕರಿ ಮಾಡಿಸಿದ್ದಾರೆ ಎನ್ನಲಾಗ್ತಿದೆ. ಸಿಎಂ ಜೊತೆ ಡಿಕೆಶಿ ಕೂಡ ತಿಂಡಿ ಸವಿದಿದ್ದಾರೆ.


