ಗದಗದಲ್ಲಿ ಚಿರತೆ ಪತ್ತೆ ಆಗಿಲ್ಲ; ಸುಳ್ಳು ಸುದ್ದಿ ಹಬ್ಬಿಸಿದರೆ 2 ವರ್ಷ ಜೈಲು ಶಿಕ್ಷೆ, ದಂಡದ ಎಚ್ಚರಿಕೆ ಕೊಟ್ಟ ಅರಣ್ಯ ಇಲಾಖೆ!

0
Spread the love

ಗದಗ: ನಗರದ ಪಂಚಾಕ್ಷರಿ ಬಡಾವಣೆಯ 6ನೇ ಕ್ರಾಸ್ ಹಾಗೂ ಎಪಿಎಂಸಿ ಬಳಿಯಲ್ಲಿ ನವೆಂಬರ್ 25 ಮತ್ತು 26ರಂದು ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯ ಸಿಸಿಟಿವಿಯಲ್ಲಿ ದೃಢಪಟ್ಟಿದೆ.

Advertisement

ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆ ಕುಂಚಿಂಗ್ ಆಪರೇಷನ್‌ ನಡೆಸಿ ಹಲವು ಕಡೆ ಹುಡುಕಾಟ ನಡೆಸಿದರೂ ಯಾವುದೇ ಕುರುಹು ಪತ್ತೆಯಾಗಿಲ್ಲ. ಅರಣ್ಯ ಅಧಿಕಾರಿಗಳ ಪ್ರಕಾರ, ಕಳೆದ ಹಲವು ದಿನಗಳಿಂದ ಯಾವುದೇ ಹೆಜ್ಜೆಗುರುತು, ಚಲನವಲನ, ಸಿಸಿಟಿವಿ ದೃಶ್ಯಾವಳಿ ಯಾವುದೂ ಸಿಕ್ಕದೇ ಇರುವುದರಿಂದ ಚಿರತೆ ಅರಣ್ಯಕ್ಕೆ ಹಿಂತಿರುಗಿರಬಹುದು ಎಂದು ನಂಬಲಾಗಿದೆ. ಆದ್ದರಿಂದ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲವೆಂದು ಪ್ರಕಟಣೆ ಜಾರಿಯಾಗಿದೆ.

ಇನ್ನೊಂದೆಡೆ, “ಚಿರತೆಯನ್ನು ಬೆಟಗೇರಿಯಲ್ಲಿ ಹಿಡಿದಿದ್ದಾರೆ” ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದು, ಇದು ಸಂಪೂರ್ಣ ತಪ್ಪು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 240 ಅಡಿಯಲ್ಲಿ 2 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಅರಣ್ಯ ಇಲಾಖೆಯ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ:-

ಕಾಡು ಪ್ರಾಣಿ ಕಂಡುಬಂದರೆ ತಕ್ಷಣ ಸಂಪರ್ಕಿಸಬೇಕು:
1926, 8151020753, 6362718315, 9611758153


Spread the love

LEAVE A REPLY

Please enter your comment!
Please enter your name here