ಕೆಂಪೇಗೌಡ ನಿಲ್ದಾಣದಲ್ಲಿ 50 ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯ, 20 ಫ್ಲೈಟ್​​ಗಳು​​ ರದ್ದು!

0
Spread the love

ದೇವನಹಳ್ಳಿ:- ಬೆಂಗಳೂರು ಅಂತಾರಾಷ್ಟ್ರೀಯ ಕೆಂಪೇಗೌಡ ನಿಲ್ದಾಣದಿಂದ ಹಾರಾಟ ನಡೆಸಬೇಕಿದ್ದ 70ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

Advertisement

ತಡರಾತ್ರಿಯಿಂದ ಈವರೆಗೆ ಸುಮಾರು 70ಕ್ಕೂ ಅಧಿಕ ವಿಮಾನಗಳ ಹಾರಾಟದಲ್ಲಿ ಅಡಚಣೆ ಉಂಟಾಗಿದೆ. ಒಟ್ಟು 22 ವಿಮಾನಗಳ ಹಾರಾಟ ಈವರೆಗೆ ರದ್ದಾಗಿದ್ದು, 50ಕ್ಕೂ ಅಧಿಕ ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ಕೊಲ್ಕತ್ತಾ, ದೆಹಲಿ, ಮುಂಬೈ, ಡೆಹ್ರಾಡೂನ್, ವಾರಣಾಸಿ, ಅಹಮದಾಬಾದ್, ಪುಣೆ, ಚೆನೈ, ಭೂಪಾಲ್ ಸೇರಿದಂತೆ ಹಲವು ಪ್ರದೇಶಗಳಿಗೆ ತೆರಳಬೇಕಿದ್ದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.

ಸರಿಯಾದ ಸಮಯಕ್ಕೆ ವಿಮಾನಗಳು ಹಾರಾಟ ನಡೆಸದ ಕಾರಣ ಏರ್​​ಪೋರ್ಟ್​ನಲ್ಲಿ ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ನಿಗದಿತ ಸಮಯಕ್ಕೆ ಬಂದರೂ ಸರಿಯಾದ ಸಮಯಕ್ಕೆ ನಾವು ಪ್ರಯಾಣಿಸಬೇಕಿದ್ದ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಮಾತ್ರವಲ್ಲದೆ ನಾಳೆಯೂ ಕೆಲ ವಿಮಾನಗಳ ಹಾರಾಟದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here