ವಿಜಯಸಾಕ್ಷಿ ಸುದ್ದಿ, ಗದಗ: ಬೆಟಗೇರಿಯ ಟೆಂಗಿನಕಾಯಿ ಬಜಾರದ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಪರ್ವತಮಲ್ಲೇಶ್ವರ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಡಿ. 4ರಿಂದ 6ರವರೆಗೆ ಜರುಗಲಿವೆ.
ಡಿ. 4ರಂದು ಸಂಜೆ 5 ಗಂಟೆಗೆ ಮಹಾರಥೋತ್ಸವ, ಡಿ. 5ರಂದು ಮುಂಜಾನೆ 9.30ಕ್ಕೆ ಅಗ್ನಿಹಾಯುವದು, ಡಿ. 6ರಂದು ಮುಂಜಾನೆ 11 ಗಂಟೆಗೆ ಉಚಿತ ಸಾಮೂಹಿಕ ವಿವಾಹ ಹಾಗೂ ಮಹಾ ಅನ್ನಸಂತರ್ಪಣೆ ಜರುಗುವದು.
ಸಾನ್ನಿಧ್ಯವನ್ನು ಬೆಟಗೇರಿಯ ಸದ್ಗುರು ಮುಕ್ಕಣ್ಣೇಶ್ವರ ಮಠದ ಪೂಜ್ಯ ಶಂಕರಾನಂದ ಮಹಾಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಕುಮಾರಸ್ವಾಮಿ ರಾಮಯ್ಯಸ್ವಾಮಿ ದೇವಾಂಗಮಠ ವಹಿಸುವರು. ಮುಖ್ಯ ಅತಿಥಿಗಳಾಗಿ ಬಸವರಾಜ ಡಾಕಪ್ಪ ಪುರವಂತರ ದಂಪತಿಗಳು ಹಾಗೂ ಅಣ್ಣಪ್ಪ ಕೊಟ್ರೇಶಪ್ಪ ಕೊಪ್ಪದ ದಂಪತಿಗಳು ಆಗಮಿಸುವರು.
ಭಕ್ತಾಧಿಗಳು ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ದೇವಸ್ಥಾನದ ಸಮಿತಿಯು ವಿನಂತಿಸಿದೆ.



