ಕೋಲಾರ: ಏಳು ದಿನದ ಮಗುವನ್ನು ಬಿಟ್ಟು ವಿಷ ಸೇವಿಸಿ ದಂಪತಿ ಸಾವ ನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಉಪ್ಪಾರಪಲ್ಲಿ ಗ್ರಾಮದಲ್ಲಿ ನಡೆದಿದೆ. ಫರಿಜಾ (22), ರೆಹಮಾನ್. (28) ಆತ್ಮಹತ್ಯೆಗೆ ಶರಣಾದ ದಂಪತಿಯಾಗಿದ್ದು, ಅಸ್ಸಾಂ ಮೂಲದ ದಂಪತಿ ಕೆಲಸ ಅರಸಿ ಕರ್ನಾಟಕಕ್ಕೆ ಬಂದಿದ್ದರು.
ಕೇವಲ ಹದಿನೈದು ದಿನಗಳ ಹಿಂದೆ ಶ್ರೀನಿವಾಸರೆಡ್ಡಿ ಎಂಬುವವರಿಗೆ ಸೇರಿದ ಕೋಳಿ ಫಾರಂನಲ್ಲಿ ಕೆಲಸಕ್ಕೆ ಸೇರಿದ್ದರು. ಕೇವಲ ಏಳು ದಿನಗಳ ಹಿಂದೆ, ಫರಿಜಾ ಅವರು ಒಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಕೋಳಿ ಫಾರಂನ ಆವರಣದಲ್ಲಿಯೇ ವಾಸವಿದ್ದ ದಂಪತಿ, ಮಗುವಿನ ಆಗಮನದಿಂದ ಸಂತೋಷದಲ್ಲಿದ್ದರು ಎನ್ನಲಾಗಿದೆ.
ಆದ್ರೆ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಫರಿಜಾ ಹಾಗೂ ರೆಹಮಾನ್ ವಿಷ ಸೇವಿಸಿ ಮನೆಯಲ್ಲಿ ಅಕ್ಕಪಕ್ಕದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ರಾಯಲ್ಪಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.



