ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದಿದ್ದು, ಈ ಗೆಲುವಿನ ನಡುವೆ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ವಿಶೇಷ ದಾಖಲೆಯನ್ನು ಮಾಡಿದ್ದಾರೆ.
ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಪಾಂಡ್ಯ ಮೂರು ಓವರ್ ಎಸೆದು 23 ರನ್ ನೀಡಿದ್ದು, ಒಂದು ವಿಕೆಟ್ ಪಡೆದರು. ಈ ವಿಕೆಟ್‌ನೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ.
ಹಾರ್ದಿಕ್ ಪಾಂಡ್ಯ ಭಾರತದ ಪರ 1000 ರನ್ ಹಾಗೂ 100 ವಿಕೆಟ್ ಗಳಿಸಿದ ಮೊದಲ ಆಟಗಾರರಾಗಿದ್ದು, ಈ ಸಾಧನೆ ಮಾಡಿದ ವಿಶ್ವದ ಐದನೇ ಆಟಗಾರ ಎನಿಸಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯದ ಮುಂಚೆ ಈ ದಾಖಲೆ ಸಾಧಿಸಿದವರು ಅಫ್ಘಾನಿಸ್ತಾನದ ಮೊಹಮ್ಮದ್ ನಬಿ,
ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ಝಿಂಬಾಬ್ವೆಯ ಸಿಕಂದರ್ ರಾಝ ಮತ್ತು ಮಲೇಶ್ಯಾದ ವೀರನ್ ದೀಪ್ ಸಿಂಗ್. ಪಾಂಡ್ಯ ಈವರೆಗೆ 123 ಟಿ20 ಪಂದ್ಯಗಳಲ್ಲಿ 100 ವಿಕೆಟ್ ಹಾಗೂ 1939 ರನ್ ಗಳಿಸಿದ್ದಾರೆ. ಇದರಿಂದ ಅವರು ಟಿ20 ಅಂತಾರಾಷ್ಟ್ರೀಯದಲ್ಲಿ 100 ವಿಕೆಟ್ ಹಾಗೂ 1000+ ರನ್ ಗಳಿಸಿದ ಭಾರತದ ಏಕೈಕ ಆಟಗಾರ ಎಂದು ದಾಖಲೆ ಬರೆದಿದ್ದಾರೆ.



