ನವೆಂಬರ್ 22ರಿಂದ ಜಗ್ಗೇಶ್ ಅವರ ರಾಘವೇಂದ್ರ ಸ್ಟೋರ‌್ಸ್ ಶುರು!

Vijayasakshi (Gadag News) :

ವಿಜಯಸಾಕ್ಷಿ ಸಿನಿಮಾ ಸುದ್ದಿ, ಬೆಂಗಳೂರು:
ನವರಸ ನಾಯಕ ಸದ್ಯ ತೋತಾಪುರಿ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಜಿ ಇದ್ದಾರೆ. ಅದಾದ ನಂತರ ನಿರ್ದೇಶಕ ಗುರುಪ್ರಸಾದ್ ಜೊತೆ ಮೂರನೇ ಸಿನಿಮಾ ರಂಗನಾಯಕನಾಗಿ ಬಣ್ಣ ಹಚ್ಚಲಿದ್ದಾರೆ. ಅಷ್ಟರೊಳಗೆ ಜಗ್ಗೇಶ್ ರಾಘವೇಂದ್ರ ಸ್ಟೋರ‌್ಸ್ ಶುರು ಮಾಡಲಿದ್ದಾರೆ. ಸ್ಟೋರ್ ಆರಂಭಕ್ಕೆ ನವೆಂಬರ್ 22 ಎಂದು ದಿನವನ್ನೂ ನಿಗದಿಪಡಿಸಲಾಗಿದೆ!

ಅರೆ! ಇದೇನಿದು..! ಜಗ್ಗೇಶ್ ಅವರು ಸಿನಿಮಾ ಬಿಟ್ಟು ಅಂಗಡಿ ಆರಂಭಿಸುತ್ತಿದ್ದಾರೆಯೇ? ಎಂದು ಗಾಬರಿಯಾಗಬೇಡಿ. ಇದು ಅವರ ಮುಂದಿನ ಸಿನಿಮಾದ ಹೆಸರು.
ರಾಘವೇಂದ್ರ ಸ್ವಾಮಿಗಳ ಪರಮಭಕ್ತನಾಗಿರುವ ಜಗ್ಗೇಶ್ ಅವರಿಗೆ ಅವರ ಹೆಸರಿನಲ್ಲೇ ಆರಂಭಗೊಳ್ಳುತ್ತಿರುವ ಸಿನಿಮಾದಿಂದ ಸಖತ್ ಖುಷಿಯಾಗಿದ್ದಾರೆ.

ಅದಕ್ಕೆ ಕಾರಣ ಬರೀ ಸಿನಿಮಾ ಹೆಸರು ಮಾತ್ರವಲ್ಲ. ರಾಘವೇಂದ್ರ ಸ್ಟೋರ‌್ಸ್ ಸಿನಿಮಾ ನಿರ್ಮಾಣ ಮಾಡುತ್ತಿರುವ ನಿರ್ಮಾಣ ಸಂಸ್ಥೆ ಮತ್ತು ನಿರ್ದೇಶಕ!

ಈಗಾಗಲೇ ರಾಜಕುಮಾರ, ಯುವರತ್ನ ಸಿನಿಮಾಗಳ ಮೂಲಕ ಹಿಟ್ ಸಿನಿಮಾ ನಿರ್ಮಿಸುವ, ನಿರ್ದೇಶಿಸುವ ಜೋಡಿ ಎನಿಸಿರುವ ವಿಜಯ ಕಿರಂಗದೂರು ಮತ್ತು ಸಂತೋಷ್ ಆನಂದರಾಮ್ ರಾಘವೇಂದ್ರ ಸ್ಟೋರ‌್ಸ್ ಶುರು ಮಾಡಲಿದ್ದಾರೆ. ನವರಸ ನಾಯಕ ಜಗ್ಗೇಶ್ ಈ ಸಿನಿಮಾದಲ್ಲಿ ನಾಯಕನಾಗಿ ವಿಜೃಂಭಿಸಲಿದ್ದಾರೆ.

ರಾಘವೇಂದ್ರ ಸ್ಟೋರ‌್ಸ್ ಸಿನಿಮಾಗೆ since 1972 ಎಂಬ ಟ್ಯಾಗ್ ಲೈನ್ ಇದ್ದು, ಇದರಲ್ಲಿ ಜಗ್ಗೇಶ್ ಪಾಕಶಾಲೆಯ ಮೇಷ್ಟ್ರ ಪಾತ್ರ ಮಾಡಲಿರುವ ಸುಳಿವು ನೀಡಿದ್ದಾರೆ.

ಅದೇನೇ ಇರಲಿ ಜಗ್ಗೇಶ್ ವೃತ್ತಿ ಬದುಕಿಗೆ ರಾಘವೇಂದ್ರ ಸ್ಟೋರ‌್ಸ್ ದೊಡ್ಡ ಸಂಪತ್ತಾಗಲಿ ಎಂಬ ಆಶಯ ನಮ್ಮದು.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿKannada News Kannada News Today
Leave A Reply

Your email address will not be published.

four × 3 =