ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಬಿಡುಗಡೆಯಾಗಿ 12 ದಿನಗಳನ್ನು ಪೂರೈಸಿದ್ದು, ಬಾಕ್ಸಾಫೀಸ್ ಪಯಣದಲ್ಲಿ ಏರಿಳಿತ ಅನುಭವಿಸುತ್ತಿದೆ. ಜೈಲಿನಲ್ಲಿ ಇರುವ ಸಂದರ್ಭದಲ್ಲೇ ರಿಲೀಸ್ ಆದ ಈ ಸಿನಿಮಾ ಹೇಗೆ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಇಡೀ ಸಿನಿ ವಲಯದಲ್ಲಿತ್ತು. ಇತ್ತ ಅಭಿಮಾನಿಗಳು ಭರ್ಜರಿ ಬೆಂಬಲ ನೀಡಿದರೂ, ಪೈರಸಿ ದೊಡ್ಡ ಹೊಡೆತ ನೀಡಿದೆ.
ಪೈರಸಿ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ‘ಡೆವಿಲ್’ ಚಿತ್ರತಂಡ, 10,500ಕ್ಕೂ ಹೆಚ್ಚು ಅಕ್ರಮ ಲಿಂಕ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದೆ. ಪೈರಸಿ ಕಾರಣದಿಂದ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗುತ್ತಿದೆ ಎಂದು ಹೇಳಿರುವ ತಂಡ, ಪ್ರೇಕ್ಷಕರು ಕಾನೂನುಬದ್ಧವಾಗಿ ಥಿಯೇಟರ್‌ಗಳಲ್ಲಿ ಸಿನಿಮಾ ವೀಕ್ಷಿಸಬೇಕು ಎಂದು ಮನವಿ ಮಾಡಿದೆ.
ಆದರೆ, ಕಲೆಕ್ಷನ್ ವಿಚಾರದಲ್ಲಿ ‘ಡೆವಿಲ್’ ಮತ್ತೆ ಚೇತರಿಕೆಯ ಲಕ್ಷಣ ತೋರಿದೆ. 7ನೇ ದಿನದಿಂದ ಲಕ್ಷಗಳ ಮಟ್ಟಕ್ಕೆ ಕುಸಿದಿದ್ದ ಕಲೆಕ್ಷನ್, 11ನೇ ದಿನ ಮತ್ತೆ ಕೋಟಿ ಗಡಿ ದಾಟಿದೆ. ಸ್ಯಾಕ್ನಿಲ್ಕ್ ಅಂದಾಜಿನಂತೆ, 11ನೇ ದಿನ ಸಿನಿಮಾ 1.24 ಕೋಟಿ ರೂ. ಗಳಿಸಿದ್ದು, 10ನೇ ದಿನದ 71 ಲಕ್ಷ ರೂ.ಗಿಂತ ಗಮನಾರ್ಹ ಏರಿಕೆ ಕಂಡಿದೆ. ಈ ಬೆಳವಣಿಗೆ ಚಿತ್ರತಂಡಕ್ಕೆ ತಾತ್ಕಾಲಿಕ ರಿಲೀಫ್ ನೀಡಿದಂತಾಗಿದೆ.



