ಬೆಂಗಳೂರು: ಬಸವೇಶ್ವರ ನಗರದ ವೆಸ್ಟ್ ಇನ್ ಹೋಟೆಲ್ ಬಳಿ ಪತಿ ತನ್ನ ಹೆಂಡತಿ ಮೇಲೆ ಗುಂಡು ಹಾರಿಸಿರುವ ಭೀಕರ ಘಟನೆ ನಡೆದಿದೆ.
ತಮಿಳು ಮೂಲದವರಾದ ಬಾಲಮುರುಗನ್ ಮತ್ತು ಭುವನೇಶ್ವರಿ ದಂಪತಿ, ಇಬ್ಬರೂ ಕೋರ್ಟ್‌ನಲ್ಲಿ ಡಿವೋರ್ಸ್ ಪ್ರಕರಣದಲ್ಲಿ ಹಾಜರಾಗಿದ್ದರು. ಇಂದು ಕೋರ್ಟ್ ಕೇಸ್ ಮುಗಿಸಿದ ಬಳಿಕ ಅವರ ನಡುವೆ ಜಗಳ ತಾರಕಕ್ಕೇರಿದ್ದು, ಬಾಲಮುರುಗನ್ ಹೆಂಡತಿ ಮೇಲೆ ಗುಂಡೇಟು ನಡೆಸಿದ್ದಾನೆ. ಗಾಯಗೊಂಡ ಭುವನೇಶ್ವರಿಯನ್ನು ಶಾನುಭೋಗ್ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಮಾಗಡಿ ರೋಡ್ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹೆಂಡತಿ ಮೇಲೆ ಗುಂಡು ಹಾರಿಸಿದ ಆರೋಪಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಆರೋಪಿ ಪಿಸ್ತೂಲನ್ನು ಅಕ್ರಮವಾಗಿ ತರಿಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.



