ದಾವಣಗೆರೆ: ನ್ಯೂಜಿಲೆಂಡ್‌ನಲ್ಲಿ ವಾಸವಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಪಿ. ನಾಗರಾಜ್ ಮತ್ತು ರಾಣಿ ನಾಗರಾಜ್ ದಂಪತಿ ತಮ್ಮ ಮಗಳ ಮದುವೆಯನ್ನು ದಾವಣಗೆರೆಯ ಖಾಸಗಿ ರೆಸಾರ್ಟ್‌ನಲ್ಲಿ ನೆರವೇರಿಸಿದ್ದಾರೆ.
ಮದುವೆ ಸಮಾರಂಭದಲ್ಲಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ, ಅರಿಶಿನ ಶಾಸ್ತ್ರ ಮತ್ತು ಮದುವೆ ಶಾಸ್ತ್ರದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನ್ಯೂಜಿಲೆಂಡ್ ಹುಡುಗನ ಸಂಬಂಧಿಕರು ಹಾಗೂ ಹುಡುಗಿಯ ಕುಟುಂಬದ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಪೂಜಾ ನಾಗರಾಜ್ ಮತ್ತು ಕ್ಯಾಂಪ್‌ಬೆಲ್ ವಿಟ್‌ವರ್ಥ್ ಸೇರಿದಂತೆ ಯುವ ಜೋಡಿ ಭಾರತೀಯ ಸಂಪ್ರದಾಯದಂತೆ ಸಂತೋಷದಿಂದ ಮದುವೆಯಾಗಿದ್ದು, ಕುಟುಂಬ ಮತ್ತು ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದರು.



