ಬಿಗ್ ಬಾಸ್ ಮನೆಯೊಳಗೆ ಫ್ಯಾಮಿಲಿ ವೀಕ್ ಸಂಭ್ರಮ ನಡೆಯುತ್ತಿದ್ದಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ದೊಡ್ಡ ಶಾಕ್ ನೀಡಿದ್ದಾರೆ. ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದೆ ಎಂದು ಘೋಷಣೆ ಮಾಡಿದ್ದು, ಮನೆಯ ವಾತಾವರಣವೇ ತಿರುಗಿಬಿದ್ದಿದೆ.
ಕಳೆದ ಎರಡು ವಾರಗಳಿಂದ ಯಾವುದೇ ಎಲಿಮಿನೇಷನ್ ಇರಲಿಲ್ಲ. ರಕ್ಷಿತಾ ಮತ್ತು ಧ್ರುವಂತ್ ಅವರನ್ನು ಸೀಕ್ರೆಟ್ ರೂಮ್‌ಗೆ ಕಳಿಸಿ ಟ್ವಿಸ್ಟ್ ನೀಡಲಾಗಿತ್ತು. ನಂತರ ಚೈತ್ರಾ ಮತ್ತು ರಜತ್ ಎಲಿಮಿನೇಟ್ ಆದರು. ಆದರೆ, ಅವರು ಅತಿಥಿಗಳು ಎಂದು ಕಿಚ್ಚ ಸುದೀಪ್ ತಿಳಿಸಿ, ಮನೆಮಂದಿಗೆ ಮತ್ತೊಮ್ಮೆ ಶಾಕ್ ನೀಡಿದ್ದರು.
ಇದೇ ಸಮಯದಲ್ಲಿ ಬಿಗ್ ಬಾಸ್ ಮನೆಗೆ ನಿರ್ದೇಶಕ ಪ್ರೇಮ್ ಮತ್ತು ರೀಷ್ಮಾ ನಾಣಯ್ಯ ಅತಿಥಿಗಳಾಗಿ ಆಗಮಿಸಿದ್ದು, ಸ್ಪರ್ಧಿಗಳೊಂದಿಗೆ ಎಂಜಾಯ್ ಮಾಡಿದ್ದಾರೆ. “ಯಾರನ್ನ ಉಳಿಸಬೇಕು, ಯಾರನ್ನ ಹೊರಗೆ ಕಳಿಸಬೇಕು ಅಂತೀರೋ ಅವರನ್ನು ಕರ್ಕೊಂಡು ಹೋಗ್ತೀವಿ” ಎಂದು ಪ್ರೇಮ್ ಪ್ರಶ್ನಿಸಿದ್ದು, ಸ್ಪರ್ಧಿಗಳಲ್ಲಿ ಆತಂಕ ಹೆಚ್ಚಿಸಿದೆ.
ಇನ್ನೂ ಬಿಗ್ ಬಾಸ್ ಸ್ಪಷ್ಟಪಡಿಸಿದ್ದು, ಈ ವಾರ ಎಲಿಮಿನೇಟ್ ಆಗುವ ಸ್ಪರ್ಧಿಗಳಿಗೆ ವಿದಾಯ ಹೇಳುವ ಅವಕಾಶವೂ ಇರುವುದಿಲ್ಲ. ಸ್ಪಂದನಾ, ಧ್ರುವಂತ್, ಸೂರಜ್ ಮತ್ತು ರಾಷಿಕಾ ನಾಮಿನೇಷನ್‌ನಲ್ಲಿ ಇದ್ದು, ಯಾರು ಮನೆಗೆ ವಿದಾಯ ಹೇಳುತ್ತಾರೆ ಎಂಬುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.



