ಸೌತ್ ಸಿನಿರಂಗದ ಸ್ಟಾರ್ ನಟಿ ನಭಾ ನಟೇಶ್ ಎರಡು ವರ್ಷ ಚಿತ್ರರಂಗದಿಂದ ಕಾಣೆಯಾಗಿದ್ದರ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಮೆಟ್ಟಿಲಿನಿಂದ ಬಿದ್ದು ಭುಜದ ಮೂಳೆ ಪುಡಿಪುಡಿಯಾದ ಪರಿಣಾಮ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗಿ ನಟಿ ತಿಳಿಸಿದ್ದಾರೆ.
ಅಪಘಾತದ ವೇಳೆ ತಲೆಯನ್ನು ರಕ್ಷಿಸಿಕೊಳ್ಳಲು ಯತ್ನಿಸಿದಾಗ ದೇಹದ ಸಂಪೂರ್ಣ ಭಾರ ಎಡ ಭುಜದ ಮೇಲೆ ಬಿದ್ದಿತ್ತು. ಪರಿಣಾಮ ಭುಜದ ಮೂಳೆಗಳು ಚೂರಾಗಿದ್ದು, ವೈದ್ಯರು ಸ್ಟೀಲ್ ರಾಡ್ ಹಾಗೂ ಹಲವು ಸ್ಕ್ರೂಗಳನ್ನು ಅಳವಡಿಸಿ ಶಸ್ತ್ರಚಿಕಿತ್ಸೆ ನಡೆಸಬೇಕಾಯಿತು.
ಗಾಯದ ನಂತರ ತಿಂಗಳುಗಳ ಕಾಲ ಬೆಡ್ ರೆಸ್ಟ್, ಫಿಸಿಯೋಥೆರಪಿ ಮತ್ತು ಮಾನಸಿಕ ಒತ್ತಡವನ್ನು ಎದುರಿಸಿದ ನಭಾ, ಸಿನಿಮಾ ಬದುಕಿನಿಂದ ಸಂಪೂರ್ಣ ದೂರ ಉಳಿಯಬೇಕಾಯಿತು. ಆದರೆ ಅದೇ ಅವಧಿಯಲ್ಲಿ ಚಿತ್ರಕಲೆ, ಸಂಗೀತ, ನೃತ್ಯ, ಪುಸ್ತಕ ಓದು ಹಾಗೂ ಕುಟುಂಬದೊಂದಿಗೆ ಸಮಯ ಕಳೆಯುವ ಮೂಲಕ ಹೊಸ ಬದುಕು ಕಟ್ಟಿಕೊಂಡಿದ್ದಾರೆ.
ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ನಭಾ ನಟೇಶ್, ‘ನಾಗಬಂಧಂ’ ಮತ್ತು ‘ಸ್ವಯಂಭು’ ಸಿನಿಮಾಗಳ ಮೂಲಕ ಮತ್ತೊಮ್ಮೆ ಬೆಳ್ಳಿತೆರೆಗೆ ಭರ್ಜರಿ ಮರಳಲು ಸಜ್ಜಾಗಿದ್ದಾರೆ.



