ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸೊಲಿಡಾರಿಟಿ ಯೂತ್ ಮೂವ್ಮೆಂಟ್ (NGO) ವತಿಯಿಂದ ಹೊಸ ವರ್ಷದ ಅಂಗವಾಗಿ ಬಡವರಿಗೆ, ನಿರ್ಗತಿಕರು ಮತ್ತು ವೃದ್ಧರು ಹಾಗೂ ಚಳಿಗಾಲದಲ್ಲಿ ತೊಂದರೆಗೊಳಗಾದ ಸುಮಾರು 80 ಜನರಿಗೆ ಉಚಿತವಾಗಿ ಕಂಬಳಿಗಳನ್ನು ವಿತರಣೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಇಮಾಮಸಾಬ ಮೊರಬದ ಹಾಗೂ ಜುನೇದ್‌ಸಾಬ ಉಮಚಗಿ ಪಾಲ್ಗೊಂಡು ಮಾತನಾಡಿ, ಇಂತಹ ಸಮಾಜಮುಖಿ ಕಾರ್ಯ ಕಳೆದ ವರ್ಷದಂತೆಯೇ ಈ ವರ್ಷವೂ ಸೊಲಿಡಾರಿಟಿ ಯೂತ್ ಮೂವ್ಮೆಂಟ್ (NGO) ವತಿಯಿಂದ ಮಾಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾಧ್ಯಕ್ಷ ಯೂಸುಫ್ ಮುಲ್ಲಾ, ಕಾರ್ಯದರ್ಶಿ ರಿಯಾಜ್ ಶೇಖ, ಕಾರ್ಯಕರ್ತರಾದ ಅಬ್ದುಲ್ ಹಫೀಜ್ ಉಮಚಗಿ, ಮುನ್ನ ಕಲ್ಮನಿ, ಅಕ್ಬರ್‌ಅಲಿ ಅತ್ತಾರ, ಜಹೀರ್ ಅಹ್ಮದ್, ಜಾವೀದ ಉಮಚಗಿ, ಖಾಸಿಂ ದರ್ಗದ್, ಮೆಹಬೂಬ್‌ಅಲಿ, ಜೈದ್ ಸರ್ವರ್, ಅಲ್ತಾಫ್ ನದಾಫ್, ಮುಹಮ್ಮದ್ ಫಹಿಮ್, ಸಮೀರ್ ಅಕ್ಕಿ, ವಸೀಮ್ ಅಹ್ಮದ್, ತನ್ವೀರ್ ಶೇಖ, ಫುರಖಾನ ಉಮಚಗಿ ಹಾಗೂ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.



