ಬೆಂಗಳೂರು: ಮೆಜೆಸ್ಟಿಕ್‌ನಿಂದ ಮಲ್ಲೇಶ್ವರಂ ಮಂತ್ರಿಮಾಲ್‌ವರೆಗೆ ಸಾಗುವ ರಸ್ತೆ ಮೂರು ತಿಂಗಳು ಬ್ಲಾಕ್ ಆಗಲಿದೆ. ಇದು B Smile ಕಂಪನಿಯ ವೈಟ್ ಟಾಪಿಂಗ್ ಕಾಮಗಾರಿ ಕಾರಣವಾಗಿದೆ.
ಪರ್ಯಾಯ ಮಾರ್ಗ:
ಮೆಜೆಸ್ಟಿಕ್‌ನಿಂದ ಬರುವ ವಾಹನಗಳು ಈಗ ಓಕುಳಿಪುರಂ ಅಂಡರ್ ಪಾಸ್ → ಸುಜಾತ್ ಸರ್ಕಲ್ ಮಾರ್ಗದಿಂದ ಮಲ್ಲೇಶ್ವರಂ ಪ್ರವೇಶಿಸಬೇಕು. ಇದರಿಂದ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಹೆಚ್ಚಾಗಲಿದೆ.
ಮೊದಲು ಮೆಜೆಸ್ಟಿಕ್‌ನಿಂದ ಮಂತ್ರಿಮಾಲ್ ಮಾರ್ಗವಾಗಿ ಕೇವಲ 10 ನಿಮಿಷದಲ್ಲಿ ಮಲ್ಲೇಶ್ವರಂ ಪ್ರವೇಶ ಮಾಡಬಹುದಿತ್ತು. ಆದರೆ ರಸ್ತೆ ಬಂದ್ ಆಗಿರುವ ಕಾರಣ ಪೀಕ್ ಅವಧಿಯಲ್ಲಿ ಮಲ್ಲೇಶ್ವರಗೆ ಬರಲು ಕನಿಷ್ಠ 30 ರಿಂದ 1 ಗಂಟೆ ಬೇಕಾಗಿದ್ದು ವಾಹನ ಸವಾರರು ಹೈರಾಣಾಗಿದ್ದಾರೆ.



