• About
  • Advertise
  • Privacy & Policy
  • Contact
Sunday, November 29, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Karnataka News

ದಸರಾ ಸಂಭ್ರಮಕ್ಕೆ ಕ್ಷಣಗಣನೆ: ನಾಳೆ ಚಾಮುಂಡಿ ಬೆಟ್ಟದಲ್ಲಿ 416ನೇ ನಾಡಹಬ್ಬಕ್ಕೆ ಚಾಲನೆ, ಗವಿಸಿದ್ದೇಶ್ವರ ಶ್ರೀಗಳಿಂದ ಉದ್ಘಾಟನೆ!

Vijaya Sakshi News Desk by Vijaya Sakshi News Desk
October 10, 2026
in Karnataka News
0
SHARES
6
VIEWS
Share on Facebook

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವದ ಸಂಭ್ರಮ ಮನೆಮಾಡಿದೆ. 416ನೇ ಸಾಲಿನ ನಾಡಹಬ್ಬದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಚಾಮುಂಡಿ ಬೆಟ್ಟದಿಂದ ಅಂಬಾವಿಲಾಸ ಅರಮನೆಯವರೆಗೆ ಸಕಲ ಸಿದ್ಧತೆಗಳು ಅಂತಿಮ ಹಂತ ತಲುಪಿವೆ. ನಾಳೆ ನಡೆಯಲಿರುವ ಭವ್ಯ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಮೈಸೂರಿನ ದಸರಾ ವೈಭವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.

ದಸರಾ ಮಹೋತ್ಸವದ ಉದ್ಘಾಟನೆಗೆ ಸಾಕ್ಷಿಯಾಗಲಿರುವ ಚಾಮುಂಡಿ ಬೆಟ್ಟದಲ್ಲಿ ಧಾರ್ಮಿಕ ವಿಧಿವಿಧಾನಗಳು ಭರದಿಂದ ಸಾಗಿವೆ. ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಅವರ ನೇತೃತ್ವದಲ್ಲಿ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯ ಶುದ್ಧಿ ಕಾರ್ಯ ನೆರವೇರಿಸಲಾಗಿದೆ. ಅರಮನೆಯಿಂದ ತರಲಾಗಿರುವ ಮಹಿಷಮರ್ದಿನಿ ಅವತಾರದ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ನವರಾತ್ರಿಯ ಪ್ರತಿದಿನವೂ ಪ್ರಾಣಪ್ರತಿಷ್ಠಾಪನೆ ಹಾಗೂ ವಿಶೇಷ ಪೂಜೆಗಳು ನಡೆಯಲಿವೆ.

ನಾಳೆ ಬೆಳಿಗ್ಗೆ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ನಿರ್ಮಿಸಲಾಗಿರುವ ಭವ್ಯ ವೇದಿಕೆಯಲ್ಲಿ ದಸರಾ ಉದ್ಘಾಟನಾ ಸಮಾರಂಭ ಜರುಗಲಿದೆ. ಬೆಳಿಗ್ಗೆ 11:50ರಿಂದ ಮಧ್ಯಾಹ್ನ 12:13ರವರೆಗೆ ನಿಗದಿಯಾಗಿರುವ ಧನುರ್ ಲಗ್ನದಲ್ಲಿ ನಾಡಹಬ್ಬಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ.

ಈ ಬಾರಿಯ ದಸರಾ ಮಹೋತ್ಸವವನ್ನು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ಹಲವು ಸಚಿವರು, ಶಾಸಕರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿಶೇಷವಾಗಿ ಈ ಬಾರಿ 100ಕ್ಕೂ ಹೆಚ್ಚು ಧರ್ಮಗುರುಗಳು ಪಾಲ್ಗೊಳ್ಳಲಿದ್ದು, ವಿವಿಐಪಿ, ವಿಐಪಿ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗಣ್ಯರು ಮತ್ತು ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭದ್ರತೆ, ವಾಹನ ಸಂಚಾರ ಮತ್ತು ಜನದಟ್ಟಣೆ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇನ್ನೊಂದೆಡೆ, ಮೈಸೂರಿನ ಅಂಬಾವಿಲಾಸ ಅರಮನೆಯಲ್ಲೂ ದಸರಾ ಸಂಭ್ರಮ ಕಳೆಗಟ್ಟಿದೆ. ರಾಜಮನೆತನದ ಸಂಪ್ರದಾಯದಂತೆ ಸಿಂಹಾಸನಕ್ಕೆ ಸಿಂಹ ಜೋಡಣೆ, ಕಂಕಣಧಾರಣೆ ಹಾಗೂ ಖಾಸಗಿ ದರ್ಬಾರ್‌ಗೆ ಸಂಬಂಧಿಸಿದ ವಿಧಿವಿಧಾನಗಳು ನಡೆಯಲಿವೆ.

ನಾಳೆ ಬೆಳಿಗ್ಗೆ 6ರಿಂದ 7:12ರೊಳಗೆ ಸಿಂಹಾಸನಕ್ಕೆ ಸಿಂಹ ಜೋಡಣೆ ಕಾರ್ಯ ನೆರವೇರಲಿದೆ. ಬಳಿಕ ಬೆಳಿಗ್ಗೆ 8:35ರಿಂದ 9:05ರವರೆಗೆ ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕಂಕಣಧಾರಣೆ ನಡೆಯಲಿದೆ.

ನಂತರ ಬೆಳಿಗ್ಗೆ 11:45ರಿಂದ ಮಧ್ಯಾಹ್ನ 12:05ರವರೆಗೆ ಸಿಂಹಾಸನಾರೋಹಣದೊಂದಿಗೆ ಅರಮನೆಯಲ್ಲಿ ಖಾಸಗಿ ದರ್ಬಾರ್ ಅಧಿಕೃತವಾಗಿ ಆರಂಭವಾಗಲಿದೆ. ರಾಜಮನೆತನದ ಸಂಪ್ರದಾಯ, ಧಾರ್ಮಿಕ ಆಚರಣೆಗಳು ಹಾಗೂ ಐತಿಹಾಸಿಕ ಪರಂಪರೆಯ ಪ್ರತೀಕವಾಗಿರುವ ಈ ಕಾರ್ಯಕ್ರಮಗಳು ದಸರಾ ಮಹೋತ್ಸವದ ವಿಶೇಷ ಆಕರ್ಷಣೆಗಳಾಗಿವೆ.

Tags: 416th Mysuru DasaraBreakingNewsChamundi HillsKarnatakaMysore Dasara InaugurationMysuru Dasara 2026NewsHeadlinesVijayasakshivijayasakshinews
ShareSendShare
Previous Post

ಎಕ್ಸ್ʼಪ್ರೆಸ್ʼವೇಯಲ್ಲಿ ಯುವತಿಯ ನಿಗೂಢ ಸಾವು! ಅಪಘಾತದ ಹಿಂದೆ ಕೊಲೆ ಸಂಚು?

Next Post

ಸಫಾರಿಗೆ ಹೋಗುವ ಪ್ರವಾಸಿಗರೇ ಗಮನಿಸಿ: ಇನ್ಮುಂದೆ ಮೊಬೈಲ್ ಬಳಕೆಗೆ ಸಂಪೂರ್ಣ ನಿಷೇಧ!

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post

ಸಫಾರಿಗೆ ಹೋಗುವ ಪ್ರವಾಸಿಗರೇ ಗಮನಿಸಿ: ಇನ್ಮುಂದೆ ಮೊಬೈಲ್ ಬಳಕೆಗೆ ಸಂಪೂರ್ಣ ನಿಷೇಧ!

Vijaya Sakshi E-Paper 29 Nov 2026
29 Nov 2026
Read E-Paper
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

November 19, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಅಕ್ರಮ ಸಂಬಂಧದ ಅನುಮಾನಕ್ಕೆ ಮಹಿಳೆಯ ಬರ್ಬರ ಹತ್ಯೆ? ಗದ್ದೆಯಲ್ಲಿ ರಕ್ತಸಿಕ್ತ ಮೃತದೇಹ ಪತ್ತೆ!

ಅಕ್ರಮ ಸಂಬಂಧದ ಅನುಮಾನಕ್ಕೆ ಮಹಿಳೆಯ ಬರ್ಬರ ಹತ್ಯೆ? ಗದ್ದೆಯಲ್ಲಿ ರಕ್ತಸಿಕ್ತ ಮೃತದೇಹ ಪತ್ತೆ!

November 29, 2026
ಒಂದೇ ದಿನ 191 ಸ್ಪಾಗಳ ಪರಿಶೀಲನೆ; ಬೆಂಗಳೂರಿನ 16 ಪಾರ್ಲರ್‌ಗಳಿಗೆ ಪೊಲೀಸರ ನೋಟಿಸ್!

ಒಂದೇ ದಿನ 191 ಸ್ಪಾಗಳ ಪರಿಶೀಲನೆ; ಬೆಂಗಳೂರಿನ 16 ಪಾರ್ಲರ್‌ಗಳಿಗೆ ಪೊಲೀಸರ ನೋಟಿಸ್!

November 29, 2026
ಪ್ರೀತಿ ನಿರಾಕರಿಸಿದ್ದಕ್ಕೆ ರೌಡಿಗಳ ಕಿರುಕುಳ? ಮಂಡ್ಯದಲ್ಲಿ 17 ವರ್ಷದ ಬಾಲಕಿ ಆತ್ಮಹತ್ಯೆ!

ಪ್ರೀತಿ ನಿರಾಕರಿಸಿದ್ದಕ್ಕೆ ರೌಡಿಗಳ ಕಿರುಕುಳ? ಮಂಡ್ಯದಲ್ಲಿ 17 ವರ್ಷದ ಬಾಲಕಿ ಆತ್ಮಹತ್ಯೆ!

November 29, 2026
ಬದುಕಿರುವವರ ಹೆಸರಲ್ಲೇ ಮರಣ ಪ್ರಮಾಣಪತ್ರ; ಕೋಲಾರ ನಗರಸಭೆ ಅಧಿಕಾರಿ ಸಸ್ಪೆಂಡ್!

ಬದುಕಿರುವವರ ಹೆಸರಲ್ಲೇ ಮರಣ ಪ್ರಮಾಣಪತ್ರ; ಕೋಲಾರ ನಗರಸಭೆ ಅಧಿಕಾರಿ ಸಸ್ಪೆಂಡ್!

November 29, 2026

Recent News

ಅಕ್ರಮ ಸಂಬಂಧದ ಅನುಮಾನಕ್ಕೆ ಮಹಿಳೆಯ ಬರ್ಬರ ಹತ್ಯೆ? ಗದ್ದೆಯಲ್ಲಿ ರಕ್ತಸಿಕ್ತ ಮೃತದೇಹ ಪತ್ತೆ!

ಅಕ್ರಮ ಸಂಬಂಧದ ಅನುಮಾನಕ್ಕೆ ಮಹಿಳೆಯ ಬರ್ಬರ ಹತ್ಯೆ? ಗದ್ದೆಯಲ್ಲಿ ರಕ್ತಸಿಕ್ತ ಮೃತದೇಹ ಪತ್ತೆ!

November 29, 2026
2
ಒಂದೇ ದಿನ 191 ಸ್ಪಾಗಳ ಪರಿಶೀಲನೆ; ಬೆಂಗಳೂರಿನ 16 ಪಾರ್ಲರ್‌ಗಳಿಗೆ ಪೊಲೀಸರ ನೋಟಿಸ್!

ಒಂದೇ ದಿನ 191 ಸ್ಪಾಗಳ ಪರಿಶೀಲನೆ; ಬೆಂಗಳೂರಿನ 16 ಪಾರ್ಲರ್‌ಗಳಿಗೆ ಪೊಲೀಸರ ನೋಟಿಸ್!

November 29, 2026
1
ಪ್ರೀತಿ ನಿರಾಕರಿಸಿದ್ದಕ್ಕೆ ರೌಡಿಗಳ ಕಿರುಕುಳ? ಮಂಡ್ಯದಲ್ಲಿ 17 ವರ್ಷದ ಬಾಲಕಿ ಆತ್ಮಹತ್ಯೆ!

ಪ್ರೀತಿ ನಿರಾಕರಿಸಿದ್ದಕ್ಕೆ ರೌಡಿಗಳ ಕಿರುಕುಳ? ಮಂಡ್ಯದಲ್ಲಿ 17 ವರ್ಷದ ಬಾಲಕಿ ಆತ್ಮಹತ್ಯೆ!

November 29, 2026
4
ಬದುಕಿರುವವರ ಹೆಸರಲ್ಲೇ ಮರಣ ಪ್ರಮಾಣಪತ್ರ; ಕೋಲಾರ ನಗರಸಭೆ ಅಧಿಕಾರಿ ಸಸ್ಪೆಂಡ್!

ಬದುಕಿರುವವರ ಹೆಸರಲ್ಲೇ ಮರಣ ಪ್ರಮಾಣಪತ್ರ; ಕೋಲಾರ ನಗರಸಭೆ ಅಧಿಕಾರಿ ಸಸ್ಪೆಂಡ್!

November 29, 2026
1
Vijaya Sakshi News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಅಕ್ರಮ ಸಂಬಂಧದ ಅನುಮಾನಕ್ಕೆ ಮಹಿಳೆಯ ಬರ್ಬರ ಹತ್ಯೆ? ಗದ್ದೆಯಲ್ಲಿ ರಕ್ತಸಿಕ್ತ ಮೃತದೇಹ ಪತ್ತೆ!

ಅಕ್ರಮ ಸಂಬಂಧದ ಅನುಮಾನಕ್ಕೆ ಮಹಿಳೆಯ ಬರ್ಬರ ಹತ್ಯೆ? ಗದ್ದೆಯಲ್ಲಿ ರಕ್ತಸಿಕ್ತ ಮೃತದೇಹ ಪತ್ತೆ!

November 29, 2026
ಒಂದೇ ದಿನ 191 ಸ್ಪಾಗಳ ಪರಿಶೀಲನೆ; ಬೆಂಗಳೂರಿನ 16 ಪಾರ್ಲರ್‌ಗಳಿಗೆ ಪೊಲೀಸರ ನೋಟಿಸ್!

ಒಂದೇ ದಿನ 191 ಸ್ಪಾಗಳ ಪರಿಶೀಲನೆ; ಬೆಂಗಳೂರಿನ 16 ಪಾರ್ಲರ್‌ಗಳಿಗೆ ಪೊಲೀಸರ ನೋಟಿಸ್!

November 29, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper