ಬಿಗ್ಬಾಸ್ ಕನ್ನಡ ಸೀಸನ್ 12ರ ಕೊನೆಯ ಕಿಚ್ಚನ ಪಂಚಾಯಿತಿ ಪ್ರೇಕ್ಷಕರಿಗೆ ದೊಡ್ಡ ಟ್ವಿಸ್ಟ್ ಕೊಟ್ಟಿದೆ. ಈ ವಾರ ರಾಶಿಕಾ ಅಧಿಕೃತವಾಗಿ ಮನೆಯಿಂದ ಹೊರಬಂದಿದ್ದಾರೆ.
ಈ ವಾರ ಕ್ಯಾಪ್ಟನ್ ಧನುಷ್ ಹೊರತುಪಡಿಸಿ ಎಲ್ಲರೂ ನಾಮಿನೇಟ್ ಆಗಿದ್ದರು. ಕೊನೆಯಲ್ಲಿ ರಘು ಮತ್ತು ರಾಶಿಕಾ ಡೇಂಜರ್ ಝೋನ್ಗೆ ಬಂದಿದ್ದರು. ಅಭಿಮಾನಿಗಳಿಗೆ ಕುತೂಹಲ ಉಕ್ಕಿದ ಕ್ಷಣದಲ್ಲಿ ರಘು ಸೇಫ್ ಆಗಿ ಫಿನಾಲೆ ಟಿಕೆಟ್ ಪಡೆದರೆ, ರಾಶಿಕಾ ಔಟ್ ಆಗಿದ್ದಾರೆ.
ಶನಿವಾರದ ಪಂಚಾಯಿತಿಯಲ್ಲಿ ಅಶ್ವಿನಿ ಒಬ್ಬರೇ ಸೇಫ್ ಆಗಿದ್ದರು. ಭಾನುವಾರದ ಎಪಿಸೋಡ್ನಲ್ಲಿ ಮೊದಲು ಗಿಲ್ಲಿ ಮತ್ತು ರಕ್ಷಿತಾ ಸೇಫ್ ಆದರು. ನಂತರ ಧ್ರುವಂತ ಹಾಗೂ ಕಾವ್ಯ ಕೂಡ ಸೇಫ್ ಆಗಿದ್ದಾರೆ.
ಇದೀಗ ಬಿಗ್ಬಾಸ್ ಮನೆಯೊಳಗೆ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳು ಧನುಷ್, ಅಶ್ವಿನಿ, ಗಿಲ್ಲಿ, ರಕ್ಷಿತಾ, ಧ್ರುವಂತ, ಕಾವ್ಯ, ರಘು ಆಗಿದ್ದಾರೆ. ಟಾಪ್–7 ಫಿಕ್ಸ್ ಆದ ಬಳಿಕ ಬಿಗ್ಬಾಸ್ ಹೌಸ್ನಲ್ಲಿ ಈಗ ಆಟ ಇನ್ನಷ್ಟು ತೀವ್ರವಾಗುವ ಸೂಚನೆ ಸಿಕ್ಕಿದೆ.



