Home Karnataka News ಪಬ್ಲಿಕ್ ಪ್ಲೇಸ್ ನಲ್ಲಿ ‘ಧಮ್’ ಹೊಡೆಯುತ್ತಾ ಫೋಟೋಶೂಟ್; ರಜತ್ ವಿರುದ್ದ ನೆಟ್ಟಿಗರ ಆಕ್ರೋಶ!

ಪಬ್ಲಿಕ್ ಪ್ಲೇಸ್ ನಲ್ಲಿ ‘ಧಮ್’ ಹೊಡೆಯುತ್ತಾ ಫೋಟೋಶೂಟ್; ರಜತ್ ವಿರುದ್ದ ನೆಟ್ಟಿಗರ ಆಕ್ರೋಶ!

0
ಪಬ್ಲಿಕ್ ಪ್ಲೇಸ್ ನಲ್ಲಿ ‘ಧಮ್’ ಹೊಡೆಯುತ್ತಾ ಫೋಟೋಶೂಟ್; ರಜತ್ ವಿರುದ್ದ ನೆಟ್ಟಿಗರ ಆಕ್ರೋಶ!
Spread the love

ಮೈಸೂರು: ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಬಳಿ ಬಿಗ್‌ಬಾಸ್ ಸ್ಪರ್ಧಿ ರಜತ್ ಸಿಗರೇಟ್ ಹಿಡಿದು ಬಿಂದಾಸ್ ಫೋಟೋಶೂಟ್ ನಡೆಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಾರಿನಿಂದ ಇಳಿಯುತ್ತಲೇ ವಿಲನ್ ಲುಕ್ಕಿನಲ್ಲಿ ನಡೆಸಿದ ಈ ಫೋಟೋಶೂಟ್‌ನ್ನು ರಜತ್ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆ ನಿಷೇಧವಾಗಿರುವ ಹಿನ್ನೆಲೆಯಲ್ಲಿ, ಈ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿಂದೆ ಶೂಟಿಂಗ್ ಸೆಟ್‌ನಲ್ಲಿ ಮಚ್ ಹಿಡಿದು ಜೈಲಿಗೆ ಹೋಗಿ ಬೇಲ್ ಮೇಲೆ ಹೊರಬಂದ ರಜತ್, ಈಗಲೂ ತಮ್ಮ ಹುಚ್ಚಾಟದ ಕಾರಣದಿಂದ ಸದ್ದು ಮಾಡಿದ್ದಾರೆ. ಸಿಗರೇಟ್ ಮತ್ತು ಅತಿ ಧೈರ್ಯಶಾಲಿ ಲುಕ್ಕಿನ ಫೋಟೋಶೂಟ್, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.


Spread the love

LEAVE A REPLY

Please enter your comment!
Please enter your name here