ವಿಜಯಸಾಕ್ಷಿ ಸುದ್ದಿ, ಗದಗ: ಅನ್ವಯಿಕ ಅನುವಂಶಶಾಸ್ತ್ರ ವಿಷಯದ ಕುರಿತು ನಗರದ ರಾಧಿಕಾ ಕಿಶೋರ್ ಮೂಡಲಗಿ ಅವರು `ಮಾಲಿಕ್ಯುಲರ್ ಕ್ಯಾರಕ್ಟರೈಜೇಷನ್ ಆಂಡ್ ಅ ಪ್ರೈಮರ್ ಸೆಲೆಕ್ಷನ್ ಫಾರ್ ಐಡೆಂಟಿಫಿಕೇಶನ್ ಆಫ್ ಅಸಿನೆಟೋಬ್ಯಾಕ್ಟರ್ ಬೌಮನ್ನಿ’ ಪ್ರಬಂಧ ಮಂಡಿಸಿದ ಹಿನ್ನೆಲೆಯಲ್ಲಿ ಧಾರವಾಡದ ಕರ್ನಾಟಕ ವಿವಿಯು ಡಾಕ್ಟರ್ ಆಫ್ ಫಿಲಾಸಾಫಿ ಪಿಎಚ್ಡಿ ಪದವಿ ಘೋಷಿಸಿದೆ.
ಕರ್ನಾಟಕ ವಿವಿಯ ಸ್ನಾತಕೋತ್ತರ ಅನ್ವಯಿಕ ಅನುವಂಶಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುರೇಶ ಬಿ. ಅರಕೇರಾ ಅವರು ಮಾರ್ಗದರ್ಶನ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.



