ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಡಲೆ ಬೀಜ ಖರೀದಿ ಕೇಂದ್ರಕ್ಕೆ ಸೋಮವಾರ ಶಾಸಕ ಡಾ. ಚಂದ್ರು ಲಮಾಣಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ತಾಲೂಕಿನಲ್ಲಿ ಕಡಲೆ ಬೆಳೆ ಬೆಳೆದ ರೈತರ ಅನುಕೂಲಕ್ಕಾಗಿ ತಾಲೂಕಾ ಕೇಂದ್ರದಲ್ಲಿ ಕಡಲೆ ಖರೀದಿ ಕೇಂದ್ರವನ್ನು ತೆರೆಯಲಾಗಿದೆ. ಪ್ರತಿ ಕ್ವಿಂಟಾಲ್‌ಗೆ 5875 ರೂ. ದರ ನಿಗದಿಪಡಿಸಿದ್ದು, ಗರಿಷ್ಠ 40 ಕ್ವಿಂಟಾಲ್‌ವರೆಗೆ ಮಾರಾಟ ಮಾಡಲು ಅವಕಾಶವಿದ್ದು, ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಜಿ.ಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ, ಜಾನು ಲಮಾಣಿ, ಗಂಗಾಧರ ಮೆಣಸಿನಕಾಯಿ, ಜಗದೀಶ ಸ್ವಾಮಿ, ಚನ್ನವೀರಪ್ಪ ಕಲ್ಯಾಣಿ, ಸಿ.ಬಿ. ಕೊಡ್ಲಿವಾಡ, ಉಮೇಶ ತೇಲಿ, ಚನ್ನಪ್ಪ ಹಲಸೂರ, ವಿ.ಬಿ. ಕೊಡ್ಲಿವಾಡ, ನಂದಾ ಪಲ್ಲೇದ, ಎಸ್.ಸಿ. ಅಡ್ರಕಟ್ಟಿ, ಮಲ್ಲಿಕಾರ್ಜುನ ಕಬಾಡಿ, ಜಗದೀಶ ತೇಲಿ, ವಿಠ್ಠಲ ಭಿಡವೆ ಮುಂತಾದವರು ಉಪಸ್ಥಿತರಿದ್ದರು.



