ಬೀದರ್: ಎಐ ಕ್ಯಾಮೆರಾ ಸಹಾಯದಿಂದ ಮಹಿಳೆಯೊಬ್ಬರು ಆಟೋದಲ್ಲಿ ಕಳೆದುಕೊಂಡಿದ್ದ 29 ಸಾವಿರ ಹಣವನ್ನು ಪತ್ತೆ ಹಚ್ಚುವಲ್ಲಿ ಬೀದರ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಜ್ಯೋತಿ ಎಂಬ ಮಹಿಳೆ ಡಿಹೆಚ್‌ಓ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅದರಂತೆ ಕಳೆದ ಮೂರು ದಿನಗಳ ಹಿಂದೆ ಆಟೋದಿಂದ ಪ್ರಯಾಣಿಸುತ್ತಿದ್ದಾಗ ಹಣವನ್ನು ಮರೆತು ಹೋಗಿದ್ದರು.
ಮನೆಯಿಂದ ಕಚೇರಿಗೆ ಬಂದು ಹಣ ಪರಿಶೀಲಿಸಿದಾಗ ಹಣದ ಬ್ಯಾಗ್ ಕಳೆದುಕೊಂಡಿದ್ದು ಗೊತ್ತಾಗಿ ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರಿಗೆ ನೆರವಾಗಿದ್ದು AI ಕ್ಯಾಮೆರಾ. ಆಟೋದಿಂದ ಬಿದ್ದಿದ್ದ ಹಣವನ್ನು ಬೈಕ್ ಸವಾರರು ಎತ್ತಿಕೊಂಡಿದ್ದ ದೃಶ್ಯ ಎಐ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಇದೀಗ ಆ 29 ಸಾವಿರ ರೂ. ಹಣವನ್ನು ಬೀದರ್ ಪೊಲೀಸರು ಮಹಿಳೆಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.



